ಬದಿಯಡ್ಕ: ಕೇರಳ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಬದಿಯಡ್ಕದ ಪಿಲಾಂಕಟ್ಟೆ ನಿವಾಸಿ ಜಯಲಕ್ಷ್ಮೀ ಹಾಗೂ ದಿ.ಗಣೇಶ್ ಅವರ ಪುತ್ರಿ ಪಿ.ಕೆ.ನಯನ ಅವರು ಸಸ್ಯಶಾಸದಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಪೆರಿಯ ಕಾಸರಗೋಡು ಕೇಂದ್ರ ವಿಶ್ವವಿದ್ಯಾಲಯದ ಜೀವರಸಾಯನಶಾಸ್ತ್ರ ಮತ್ತು ಆಣ್ವಿಕ ಜೀವಶಾಸ್ತ್ರದ ಪ್ರಾಧ್ಯಾಪಕ ಡಾ. ರಾಜೇಂದ್ರ ಪಿಲಾಂಕಟ್ಟೆ ಅವರ ಸೊಸೆಯಾಗಿದ್ದಾರೆ.
ಕೇರಳದಲ್ಲಿ ಕ್ಯಾಂಡೊಲಿಯೊಮೈಸಸ್ ಎಂಬ ಅಣಬೆ ಕುಲದ ಮಾಫೆರ್Ç- ಮತ್ತು ಆಣ್ವಿಕ ವರ್ಗೀಕರಣ ಅಧ್ಯಯನದ ವಿಷಯದ ಮೇಲೆ ಪಿಎಚ್‍ಡಿ ಅಧ್ಯಯನವನ್ನು ನಡೆಸಲಾಗಿದೆ. ಖಾದ್ಯ ಮತ್ತು ಔಷಧಿಯ ಮೌಲ್ಯದ ಕೆಲವು ಜಾತಿಗಳು ಈ ಕುಲಕ್ಕೆ ಸೇರಿವೆ. ಜಗತ್ತಿನಲ್ಲಿ ಕೇವಲ 55 ಜಾತಿಗಳನ್ನು ಮಾತ್ರ ಪ್ರತಿನಿಧಿಸಲಾಗುತ್ತದೆ. ಸಮಗ್ರ ರೂಪವಿಜ್ಞಾನ ಮತ್ತು ಆಣ್ವಿಕ ಫೈಲೋಜೆನೆಟಿಕ ವಿಶ್ಲೇಷಣೆಯ ಮೂಲಕ, ಕೇರಳದಿಂದ 30 ಕ್ಯಾಂಡೊಲಿಯೊಮೈಸಸ್ ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 21 ಪ್ರಭೇದಗಳು ವಿಜ್ಞಾನಕ್ಕೆ ಹೊಸತಾಗಿದೆ. ಈ ಕುರಿತು ಸಮಗ್ರ ಪ್ರಬಂಧ ಮಂಡಿಸಿ ಡಾ. ಪಿ.ಕೆ.ನಯನ ಅವರು ಪಿಎಚ್‍ಡಿ ಪದವಿ ಅರ್ಹರಾಗಿದ್ದಾರೆ.




-Nayana.jpg)
