ಬದಿಯಡ್ಕ: ಕೇರಳ ಮರಾಟಿ ಸಂರಕ್ಷಣಾ ಸಮಿತಿ ಕಾಸರಗೋಡು ನೇತೃತ್ವದಲ್ಲಿ ಮರಾಟಿ ದಿನದ ಅಂಗವಾಗಿ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ವಿದ್ಯುತ್ ಇಲಾಖೆಯ ಸಹಾಯಕ ಇಂಜಿನಿಯರ್ ರಾಜಗೋಪಾಲ ಉದ್ಘಾಟಿಸಿದರು. ಸಂರಕ್ಷಣಾ ಸಮಿತಿಯ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ, ಗೌರವಾಧ್ಯಕ್ಷ ಸುಬ್ರಾಯ ನಾಯ್ಕ ಅಡೂರು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ನೀರ್ಚಾಲು, ವಿಶ್ವನಾಥ್ ಕಾಸರಗೋಡು, ರಾಮ ನಾಯ್ಕ ಅಡೂರು, ಗಂಗಾಧರ ಓಣಿಯಡ್ಕ, ಕೃಷ್ಣ ಪೆರ್ಲ, ವಿಠಲ ನಾಯ್ಕ, ರಾಧಾಕೃಷ್ಣ ಪೈಕ, ಹರೀಶ್ ಚೇರಾಲ್ ಹಾಗೂ ಪ್ರಮುಖರು ಭಾಗವಹಿಸಿದರು. ಚಂದ್ರಶೇಖರ್ ಮಾಸ್ತರ್ ಏತಡ್ಕ ಸ್ವಾಗತಿಸಿ, ಮಾಯಿಲ ನಾಯ್ಕ ವಂದಿಸಿದರು.




.jpg)
