ಮಂಜೇಶ್ವರ: ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರೀ ಮಂದಿರದಲ್ಲಿ ಜರಗುವ ನವರಾತ್ರಿ ಮಹೋತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವಿ ಯಕ್ಷಗಾನ ಕಲಾಸಂಘದವರಿಂದ ಸೆ. 24 ರಂದು ಸಂಜೆ 5 ರಿಂದ ಶ್ರೀ ಕೃಷ್ಣ ಕಾರುಣ್ಯ ಎಂಬ ಕಥಾಭಾಗದ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶುಭಾನಂದ ಶೆಟ್ಟಿ ಕುಳೂರು, ಚೆಂಡೆಯಲ್ಲಿ ರಾಜಾರಾಮ ಬಲ್ಲಾಳ್ ಚಿಪ್ಪಾರು ಮತ್ತು ಮೃದಂಗದಲ್ಲಿ ಗಣಪತಿ ಭಟ್ ಪೆರ್ಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




