ಕಾಸರಗೋಡು: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಯ ಮೂಲಕ ದಾಖಲೆ ನಿರ್ಮಿಸಿ ಗಮನ ಸೆಳೆದಿದ್ದ, ಕಾಞಂಗಾಡಿನ ಕಾಲೇಜು ವಿದ್ಯಾರ್ಥಿ ಮೃತದೇಹ ಮನೆಯ ಮಲಗುವ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪಡನ್ನಕಾಡ್ ಕರುವಳಂ ಕಾರಕುಂಡ್ ರಸ್ತೆಯ ಶ್ರೀನಿಲಯಂ ನಿವಾಸಿ, ಪವಿತ್ರನ್-ಶಾಂತಿ ದಂಪತಿ ಪುತ್ರ ಹಾಗೂ ಕಾಞಂಗಾಡು ಪಡನ್ನಕ್ಕಾಡು ನೆಹರೂ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಶ್ರೀಹರಿ (21)ಮೃತಪಟ್ಟವರು.
ಭಾನುವಾರ ರಾತ್ರಿ ಘಟನೆ ನಡೆದಿದ್ದು, ಮನೆಯವರು ಕೊಠಡಿ ಬಾಗಿಲು ತೆರೆದು ನೋಡಿದಾಗ ಶ್ರೀಹರಿ ನೇಣಿನಲ್ಲಿ ನೇತಾಡುತ್ತಿರುವುದನ್ನು ಕಂಡು, ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಶ್ರೀಹರಿ ಒಂದು ಕೈ ಬೆರಳಿನಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ನಿರಂತರ ಪುಸ್ತಕದ ಹಾಳೆಯನ್ನು ತಿರುಗಿಸುವ ಕೌಶಲ್ಯದ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ್ದರು. ಕಲಾರಂಗದಲ್ಲೂ ಉತ್ತಮ ಪ್ರತಿಭೆ ಹೊಂದಿದ್ದರು. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


