ಪೆರ್ಲ: ಬಜಕೂಡ್ಲು ನಿವಾಸಿ ಜಯಪ್ರಕಾಶ್(63)ಕೆಲಸದ ಮಧ್ಯೆ ಕುಸಿದು ಬಿದ್ದು, ಮೃತಪಟ್ಟಿದ್ದಾರೆ. ಮರ ಕಡಿಯುವ ಕೆಲಸ ನಿರ್ವಹಿಸುತ್ತಿದ್ದ ಇವರು, ಸೋಮವಾರ ಕಾಟುಕುಕೆ ಖಂಡೇರಿ ಭಾಗದಲ್ಲಿ ಕೆಲಸ ನಿರ್ವಹಿಸುವ ಮಧ್ಯೆ ಎದೆನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಪುತ್ತೂರು ತಿಂಗಳಾಡಿ ನಿವಾಸಿಯಾಗಿರುವ ಇವರು, ಕಳೆದ ಹಲವು ವರ್ಷಗಳಿಂದ ಬಜಕೂಡ್ಲಿನ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದರು.


