ಕಾಸರಗೋಡು: ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ಸಾಗಿಸುವ ಮರೆಯಲ್ಲಿ ವ್ಯಾಫಕವಾಗಿ ಮಾದಕ ದ್ರವ್ಯ ಸಾಗಾಟ ನಡೆಸುತ್ತಿದ್ದ ಆಂಬುಲೆನ್ಸ್ ಚಾಲಕನನ್ನು ಅಬಕಾರಿ ದಳ ಸಿಬ್ಬಂದಿ ಬಂಧಿಸಿದ್ದಾರೆ. ತಳಿಪರಂಬ ಕಂಡಿವಾದುಕ್ಕಲ್ ಎಂಬಲ್ಲಿ ವಾಸಿಸುವ, ಪುದಿಯಪುರ ನಿವಾಸಿ ಕೆ.ಪಿ ಮುಸ್ತಫಾ(37)ಬಂಧಿತ. ಈತನ ವಶದಲ್ಲಿದ್ದ 430ಮಿ.ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ದು ವಾಪಸಾಗುವ ಮಧ್ಯೆ ಎಂಡಿಎಂಎ ಖರೀದಿಸಿ ಊರಲ್ಲಿ ಮಾರಾಟ ಮಾಡುತ್ತಿದ್ದನು. ಈತನ ಬಗ್ಗೆ ಅಬಕಾರಿ ದಳ ಸಿಬ್ಬಂದಿಗೆ ಸಂಶಯ ಮೂಡಿದ್ದ ಹಿನ್ನೆಲೆಯಲ್ಲಿ ನಿಗಾಯಿರಿಸಿದ್ದು, ಭಾನುವಾರ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ.




