ಕಾಸರಗೋಡು: ಉದುಮ ಅರಮಂಗಾನ ಆಲಿಂಗಾಲ್ ನಿವಾಸಿ ರಂಜಿತ್ ಎಂಬವರ ಪತ್ನಿ ಕೆ. ನಂದನಾ(20)ಅವರ ಮೃತದೇಹ ಪತಿ ಮನೆಯಲ್ಲಿ ನೇಣು ಬಿಗಿದ ಸಥಿತಿಯಲ್ಲಿ ಪತ್ತೆಯಾಗಿದೆ. ನಂದನಾ ಹಾಗೂ ರಂಜಿತ್ ಪರಸ್ಪರ ಪ್ರೀತಿಸುತ್ತಿದ್ದು, ಆರು ತಿಂಗಳ ಹಿಂದೆಯಷ್ಟೆ ವಿವಾಹಿತರಾಗಿದ್ದರು. ನಂತರ ನಂದನಾ ಪತಿ ಮನೆಯಲ್ಲೇ ವಾಸಿಸುತ್ತಿದ್ದರು.
ಈ ಮಧ್ಯೆ ಭಾನುವಾರ ಬೆಳಗ್ಗೆ ತನ್ನ ತಾಯಿಗೆ ಕರೆ ಮಾಡಿ, ತಾನು ಸಾಯುತ್ತಿರುವುದಾಗಿ ತಿಳಿಸಿ, ನೇಣಿನ ಚಿತ್ರವನ್ನೂ ರವಾನಿಸಿದ್ದಳು. ಈ ಬಗ್ಗೆ ನಂದನಾ ತಾಯಿ ರಂಜಿತ್‍ಗೆ ಮಾಹಿತಿ ನೀಡಿದ್ದು, ತಕ್ಷಣ ಪತಿ ಮನೆಯವರು ಕೊಠಡಿಗೆ ಬಳಿ ತೆರಳಿ ಬಾಗಿಲು ಬಡಿದರೂಪ್ರತಿಕ್ರಿಯೆ ಇಲ್ಲದಿರುವುದರಿಂದ ಬಾಗಿಲು ಒಡೆದು ನೋಡಿದಾಗ ನೇಣಿನಲ್ಲಿ ನೇತಾಡುತ್ತಿರುವುದು ಕಂಡು ಬಂದಿತ್ತು. ತಕ್ಷಣ ಕೆಳಗಿಳಿಸಿ ದೇಳಿಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮದುವೆಗೆ ಮೊದಲು ನಂದನಾ ಕಾಸರಗೋಡಿನಲ್ಲಿ ಲ್ಯಾಬ್ ಟೆಕ್ನಿಶೀಯನ್ ಆಗಿ ದುಡಿಯುತ್ತಿದ್ದರು. ಸಾವಿನ ಬಗ್ಗೆ ನಂದನಾ ಮನೆಯವರು ಸಂಶಯ ವ್ಯಕ್ತೊಪಡಿಸಿದ್ದಾರೆ. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





