ಕಾಸರಗೋಡು: ಮೊಂತಿ ಹಬ್ಬವನ್ನು ಸೋಮವಾರ ಜಿಲ್ಲೆಯ ವಿವಿಧ ಇಗರ್ಜಿಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಇಗರ್ಜಿಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಬಲಿ ಪೂಜೆ ನೆರವೇರಿತು.
ಕಯ್ಯಾರು ಕ್ರಿಸ್ತರಾಜ ಇಗರ್ಜಿಯಲ್ಲಿ ನಡೆದ ಬಲಿಪೂಜೆಯನ್ನು ಬೆಳ್ಳೂರು ಸಂತ ಡೊಮಿನಿಕ್ ಶಾಲೆಯ ಪ್ರಾಂಶುಪಾಲ ವಂದನೀಯ ಫಾದರ್ ಅರುಣ್ ಫ್ರಾನ್ಸಿಸ್ ಡಿ ಸೋಜ ನೆರವೇರಿಸಿದರು. ಕಯ್ಯಾರು ಕ್ರಿಸ್ತ ರಾಜ ಇಗರ್ಜಿ ಧರ್ಮಗುರು ವಂದನೀಯ ಫಾ. ವಿಶಾಲ್ ಮೋನಿಸ್ ಪ್ರಾರ್ಥನಾ ವಿಧಿ ವಿಧಾನಕ್ಕೆ ನೇತೃತ್ವ ನೀಡಿದರು. ಇಗರ್ಜಿ ವಠಾರದಲ್ಲಿ ಮೇರಿ ಮಾತೆ ವಿಗ್ರಹಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.
ಜಿಲ್ಲೆಯ ವಿವಿಧೆಡೆ ಚರ್ಚ್‍ಗಳಲ್ಲಿ ಬಲಿ ಪೂಜೆ, ಹೊಸ ತೆನೆಯ ಆಶೀರ್ವಚನ ಮತ್ತು ವಿತರಣೆ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಕ್ರೈಸ್ತರಿಂದ ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ನಡೆಯಿತು. ನಂತರ ಮನೆಗಳಲ್ಲಿ ಕೌಟುಂಬಿಕವಾಗಿ ಹಬ್ಬದ ಭೋಜನ ಕಾರ್ಯಕ್ರಮ ವಿಶೇಷತೆಯಾಗಿದೆ.




.jpg)


