ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಹಾಯ ಕೇಂದ್ರ ವತಿಯಿಂದ ರಾಷ್ಟ್ರೀಯ ವಯೋಶ್ರೀ ಯೋಜನೆಗೆ ಫಲಾನುಭವಿಗಳನ್ನು ಗುರುತಿಸಲು ಸ್ಕ್ರೀನಿಂಗ್ ಶಿಬಿರ ಸೆ. 9ರಂದು ಬೆಳಗ್ಗೆ 10ಕ್ಕೆ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಜರುಗಲಿದೆ.
ಶಿಬಿರದಲ್ಲಿ 60 ವರ್ಷ ಮೇಲ್ಪಟ್ಟ ಮತ್ತು ವಿವಿಧ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ಸಹಾಯಕ ಸಾಧನಗಳನ್ನು ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳನ್ನು ಗುರುತಿಸಲು ಸ್ಕ್ರೀನಿಂಗ್ ಶಿಬಿರ ಆಯೋಜಿಸಲಾಗಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಶ್ರೀ ಎಂ.ಎಲ್. ಅಶ್ವಿನಿ ಶಿಬಿರ ಉದ್ಘಾಟಿಸುವರು. ಸಹಾಯಕ ಸಾಧನಗಳಿಗಾಗಿ ನೋಂದಾಯಿಸಿಕೊಂಡ ಎಲ್ಲಾ ಜನರು ಆ ದಿನ ಸ್ಕ್ರೀನಿಂಗ್ ಶಿಬಿರದಲ್ಲಿ ಹಾಜರಿರಬೇಕು. ಎಪಿಎಲ್ ವರ್ಗದಲ್ಲಿರುವವರು ತಮ್ಮ ಆದಾಯ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ಶ್ರವಣ ಸಾಧನದ ಅಗತ್ಯವಿರುವವರು ಪ್ರಸಕ್ತ ವರ್ಷದ ಆಡಿಯೋಗ್ರಾಮ್ ವರದಿಯನ್ನು ತರಬೇಕು. ಜತೆಗೆ ತಮ್ಮ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‍ನ ಮೂಲ ಪ್ರತಿಯನ್ನು ಸಹ ಹೊಂದಿರಬೇಕು. ನೋಂದಾಯಿಸದವರೂ ಶಿಬಿರದಲ್ಲಿ ಭಾಗವಹಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(8075388696, 7306352500)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




