ಮಂಜೇಶ್ವರ :ಮಂಜೇಶ್ವರ ಉಪ ಜಿಲ್ಲಾ ವಿಜ್ಞಾನ ಮೇಳದ ವಿವಿಧ ಸಮಿತಿಗಳ ಪುನರಾವಲೋಕನ ಸಭೆ ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಸ್ಥಳೀಯ ವಾರ್ಡ್ ಸದಸ್ಯೆ ಆಶಾಲತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರ ವೇದಿಕೆಯ ಅಧ್ಯಕ್ಷ ಶ್ಯಾಮ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ವಿಜಯಕುಮಾರ್ ಸಭೆಯ ಕುರಿತು ಮಾತನಾಡಿದರು.
ಸಭೆಯಲ್ಲಿ ಪಿ.ಇ.ಸಿ ಕಾರ್ಯದರ್ಶಿ ಪ್ರತಿಭಾ ಟೀಚರ್, ಶ್ರೀವಾಣಿವಿಜಯ ಎ.ಯು.ಪಿ.ಶಾಲೆಯ ಪಿಟಿಎ ಅಧ್ಯಕ್ಷರು, ಪಂಚಾಯತಿ ಸದಸ್ಯ ಶಿವಕುಮಾರ್, ಪಿಟಿಎ ಉಪಾಧ್ಯಕ್ಷ
ಮೋಹನ್ ಮಾಸ್ತರ್, ಎಂ. ಪಿ. ಟಿ. ಎ ಉಪಾಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಸಮಿತಿಗಳ ಕನ್ವೀನರ್ ಗಳು ತಮ್ಮ ಕಾರ್ಯಯೋಜನೆಗಳನ್ನು ಮಂಡಿಸಿದರು. ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ವಿವಿಧ ಕ್ಲಬ್ ಗಳ ಕಾರ್ಯದರ್ಶಿಗಳು ಮೇಳಗಳ ಕಾರ್ಯಯೋಜನೆಗಳ ವರದಿ ಮಂಡಿಸಿದರು.
ಸಭೆಯಲ್ಲಿ ಶ್ರೀವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯನಿ ಕೃಷ್ಣವೇಣಿ ಟೀಚರ್ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಿಶೋರ್ ಕುಮಾರ್ ನಿರೂಪಿಸಿದರು.





