HEALTH TIPS

ಮಾಸಿಕ 1000 ರೂ.ಗಳ ಆರ್ಥಿಕ ನೆರವು; ಮಹಿಳಾ ಸುರಕ್ಷತಾ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ

ತಿರುವನಂತಪುರಂ: ಮಹಿಳೆಯರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೇರಳ ಸರ್ಕಾರ ಪ್ರಾರಂಭಿಸಿರುವ 'ಮಹಿಳಾ ಸುರಕ್ಷತಾ ಯೋಜನೆ'ಗೆ ಅರ್ಜಿ ಸಲ್ಲಿಕೆ ಇಂದಿನಿಂದ  ಪ್ರಾರಂಭವಾಗಿದೆ.

ಅರ್ಜಿಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ  ksmart.lsgkerala.gov.in  ವೆಬ್‍ಸೈಟ್ ಮೂಲಕ ಸಲ್ಲಿಸಬೇಕು. 


ಈ ಯೋಜನೆಯು ರಾಜ್ಯದಲ್ಲಿ ಪ್ರಸ್ತುತ ಇತರ ಸಾಮಾಜಿಕ ಕಲ್ಯಾಣ ಯೋಜನೆಗಳು ಅಥವಾ ಪಿಂಚಣಿಗಳ ಫಲಾನುಭವಿಗಳಲ್ಲದ ಅರ್ಹ ಮಹಿಳೆಯರಿಗೆ ತಿಂಗಳಿಗೆ 1000 ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಈ ಯೋಜನೆಯು ಕೇರಳದ ಖಾಯಂ ನಿವಾಸಿಗಳಾದ 35 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಮತ್ತು ಟ್ರಾನ್ಸ್ ಮಹಿಳೆಯರ ವರ್ಗಕ್ಕೆ ಸೇರಿದವರಿಗೆ ಪ್ರಯೋಜನವನ್ನು ನೀಡುತ್ತದೆ. ಅಂತ್ಯೋದಯ ಅನ್ನ ಯೋಜನೆ (ಹಳದಿ ಕಾರ್ಡ್) ಮತ್ತು ಆದ್ಯತಾ ವರ್ಗ (ಗುಲಾಬಿ ಕಾರ್ಡ್) ಪಡಿತರ ಚೀಟಿಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು.

ವಿಧವಾ ಪಿಂಚಣಿ, ಅವಿವಾಹಿತ ಪಿಂಚಣಿ, ಅಂಗವೈಕಲ್ಯ ಪಿಂಚಣಿ ಹೊರತುಪಡಿಸಿ, ವಿವಿಧ ಸೇವಾ ಪಿಂಚಣಿಗಳು, ಕುಟುಂಬ ಪಿಂಚಣಿ, ಇಪಿಎಫ್ ಪಿಂಚಣಿ ಪಡೆಯುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸೇವೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಶಾಶ್ವತ ಅಥವಾ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುವವರು ಈ ಯೋಜನೆಯಿಂದ ವಿನಾಯಿತಿ ಪಡೆದಿದ್ದಾರೆ.

ಅರ್ಜಿದಾರರು ತಮ್ಮ ವಯಸ್ಸನ್ನು ಸಾಬೀತುಪಡಿಸಲು ಈ ಕೆಳಗಿನ ಯಾವುದಾದರೂ ಒಂದನ್ನು ಹಾಜರುಪಡಿಸಬೇಕು: ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ, ಚಾಲನಾ ಪರವಾನಗಿ, ಪಾಸ್‍ಪೆÇೀರ್ಟ್. ಇವುಗಳನ್ನು ಹೊಂದಿಲ್ಲದವರು ವೈದ್ಯಕೀಯ ಅಧಿಕಾರಿ ನೀಡಿದ ಪ್ರಮಾಣಪತ್ರವನ್ನು ಬಳಸಬಹುದು.

ಬ್ಯಾಂಕ್ ಖಾತೆ ವಿವರಗಳು, IಈSಅ ಕೋಡ್ ಮತ್ತು ಆಧಾರ್ ವಿವರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಸ್ವಯಂ ದೃಢೀಕರಿಸಿದ ಅಫಿಡವಿಟ್ ಅನ್ನು ಸಹ ಸೇರಿಸಬೇಕು. ಪ್ರಯೋಜನವನ್ನು ಪಡೆಯುವವರು ಪ್ರತಿ ವರ್ಷ ಆಧಾರ್ ಆಧರಿಸಿ ವಾರ್ಷಿಕ ಮಸ್ಟರಿಂಗ್‍ಗೆ ಒಳಗಾಗಬೇಕು. ಫಲಾನುಭವಿಯ ಮರಣದ ಸಂದರ್ಭದಲ್ಲಿ ವಾರಸುದಾರರಿಗೆ ಪ್ರಯೋಜನವನ್ನು ವರ್ಗಾಯಿಸಲು ಯಾವುದೇ ಅವಕಾಶವಿಲ್ಲ.

ಫಲಾನುಭವಿಯು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದರೆ ಅಥವಾ ರಿಮಾಂಡ್‍ನಲ್ಲಿದ್ದರೆ, ಆ ಅವಧಿಗೆ ಹಣಕಾಸಿನ ನೆರವು ಲಭ್ಯವಿರುವುದಿಲ್ಲ. ಸುಳ್ಳು ಮಾಹಿತಿಯನ್ನು ಒದಗಿಸುವ ಮೂಲಕ ಪ್ರಯೋಜನವನ್ನು ಪಡೆದಿರುವುದು ಗಮನಕ್ಕೆ ಬಂದರೆ, ಶೇಕಡಾ 18 ರಷ್ಟು ಬಡ್ಡಿಯೊಂದಿಗೆ ಮೊತ್ತವನ್ನು ಮರುಪಡೆಯಲಾಗುತ್ತದೆ ಎಂದು ಸ್ಥಳೀಯಾಡಳಿತ ಇಲಾಖೆಯ ಪ್ರಧಾನ ನಿರ್ದೇಶಕರು ತಿಳಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries