ಕೋಲ್ಕತ್ತ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಮೊದಲ ಹಂತದ ಪರಿಶೀಲನೆಗಾಗಿ ಚುನಾವಣಾ ಆಯೋಗವು ಐದು ಮಂದಿಯನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ.
'ಈ ಎಲ್ಲಾ ಅಧಿಕಾರಿಗಳು ಬೇರೆ ರಾಜ್ಯಕ್ಕೆ ಸೇರಿದವರು' ಎಂದು ಆಯೋಗವು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಆಯೋಗವು ಜಾರಿ ಮಾಡಿದ ಕಾನೂನಿನಂತೆ, ಇವಿಎಂಗಳಲ್ಲಿ ಪ್ರತಿ ಅಭ್ಯರ್ಥಿಯ ಭಾವಚಿತ್ರಗಳನ್ನು ಪ್ರಕಟಿಸಲಾಗುತ್ತದೆ.
ನೋಡಲ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ಮೊದಲ ಹಂತದಲ್ಲಿ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಲಾಗುತ್ತದೆ.
ಅಧಿಕಾರಿಗಳಾದ ಸಾನಿಯಾ ಕಯೆಮ್ ಮಿಜೆ (ಉಪ ಸಿಇಒ ಅರುಣಾಚಲಪ್ರದೇಶ), ಯೋಗೇಶ್ ಗೋಸಾವಿ (ಉಪ ಸಿಇಒ ಮಹಾರಾಷ್ಟ್ರ) ಪಿ.ಕೆ. ಬೊರೊ (ಹೆಚ್ಚುವರಿ ಸಿಇಒ ಮೇಘಾಲಯ), ಇಥೆಲ್ ರೊಥಂಗ್‌ಪುಜಿ (ಜಂಟಿ ಸಿಇಒ ಮಿಝೋರಾಂ) ಹಾಗೂ ಕಾನಿಷ್ಕಾ ಕುಮಾರ್ (ಅಧೀನ ಕಾರ್ಯದರ್ಶಿ, ಕೇಂದ್ರ ಚುನಾವಣಾ ಆಯೋಗ) ಅವರನ್ನು ನೇಮಿಸಲಾಗಿದೆ.
2021ರ ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ 80 ಸಾವಿರ ಮತಗಟ್ಟೆಗಳಿದ್ದವು.
ಈಗ ನಡೆಯುತ್ತಿರುವ ಮತಪಟ್ಟಿದಾರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯ ನಂತರ ಮತಗಟ್ಟೆಗಳ ಸಂಖ್ಯೆ ಇನ್ನೂ 10 ಸಾವಿರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಮಿಕ್ ಭಟ್ಟಾಚಾರ್ಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷಬಂಗಾಳದ ಜನರು ಬದಲಾವಣೆಯನ್ನು ಬಯಸಿದ್ದು ತೃಣಮೂಲ ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿದ್ದಾರೆ. ನಾವು ಹೊಸ ಕ್ಷೇತ್ರ ಹಿಂದೆ ಗೆದ್ದ ಸ್ಥಿರವಾಗಿ ಮತ ಗಳಿಸಿದ ಕ್ಷೇತ್ರಗಳ ಮೇಲೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ.

