ಕಾಸರಗೋಡು: ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ನಂತರ ಕಾಸರಗೋಡು ಜಿಲ್ಲೆಯ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಚೇಂಬರ್‍ನಲ್ಲಿ ಈ ಬಗ್ಗೆ ಮಾಹಿತಿ ನಿಡಿ ಮಾತನಾಡಿದರು.
ಜಿಲ್ಲೆಯಲ್ಲಿ ಶೇ. 94.72 ರಷ್ಟು ಜನರು ಎಸ್‍ಐಆರ್ ಚಟುವಟಿಕೆಯಲ್ಲಿ ಸೇರ್ಪಡೆಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 10,21,345 ಜನರು ಮತದಾರರನ್ನೊಳಗೊಂಡ ಪಟ್ಟಿ ಪ್ರಕಟಿಸಲಾಗಿದೆ. ಜಿಲ್ಲೆಯ ಚುನಾವಣಾ ಅಧಿಕಾರಿಗಳು, ಬಿಎಲ್‍ಎ, ಬಿಎಲ್‍ಒ, ಕುಟುಂಬಶ್ರೀ ಸದಸ್ಯರು, ಹಸಿರು ಕ್ರಿಯಾ ಸೇನಾ ಸದಸ್ಯರು, ಎಸ್‍ಸಿ ಮತ್ತು ಎಸ್‍ಟಿ ಪ್ರವರ್ತಕರು ಸೇರಿದಂತೆ ಹಲವು ಮಂದಿ ಎಸ್‍ಐಆರ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ.
ಕರಡು ಪಟ್ಟಿಯ ಬಗ್ಗೆ ದೂರುಗಳು ಮತ್ತು ಆಕ್ಷೇಪಣೆಗಳಿದ್ದಲ್ಲಿ, ಜನವರಿ 22, 2026 ರವರೆಗೆ ಸಲ್ಲಿಸಬಹುದು. ಅಂತಿಮ ಪಟ್ಟಿಯನ್ನು ಫೆಬ್ರವರಿ 21 ರಂದು ಪ್ರಕಟಿಸಲಾಗುವುದು. ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಫಾರ್ಮ್ 6ನ್ನು ಭರ್ತಿಮಾಡಿ ನೀಡಬೇಕು.
ಜಿಲ್ಲೆಯಲ್ಲಿ 18,386ಮಂದಿ ಸಾವನ್ನಪ್ಪಿದ್ದರೆ, ಸಂಪರ್ಕಿಸಲು ಸಾಧ್ಯವಾಗದ 13,689ಮಂದಿಯಿದ್ದಾರೆ. 20,459 ಮಂದಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 2,571 ಮಂದಿ ಹೆಸರು ಎರಡು ಬಾರಿ ದಾಖಲಾಗಿದೆ. 1,806 ಮಂದಿ ಇತರ ವರ್ಗಗಳಲ್ಲಿದ್ದು, ಒಟ್ಟು 56,911 ಎಸ್‍ಐಆರ್ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ.
ವಿಶೇಷ ತೀವ್ರ ಪರಿಷ್ಕರಣೆಯ ನಂತರ ಪ್ರಕಟಿಸಲಾಗಿರುವ ಮತದಾರರ ಕರಡು ಪಟ್ಟಿಯನ್ನು ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಹಸ್ತಾಂತರಿಸಿದರು. ಈ ಬಗ್ಗೆ ಯಾವುದೇ ದೂರುಗಳಿದ್ದರೆ, ಜನವರಿ 22, 2026 ರವರೆಗೆ ಅರ್ಜಿ ಸಲ್ಲಿಸಬಹುದು. ಎಲ್ಲಾ ದೂರುಗಳನ್ನು ಸಂಬಂಧಪಟ್ಟ ಇಆರ್‍ಒ ಪರಿಶೀಲಿಸಲಿದ್ದಾರೆ.ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 983 ಇದ್ದ ಮತಗಟ್ಟೆಗಳ ಸಂಖ್ಯೆ 1141ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 158 ಮತಗಟ್ಟೆಗಳು ಹೊಸದಾಗಿ ರಚನೆಯಾಗಲಿವೆ.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ. ರಮೇಶ್, ಅಬ್ದುಲ್ಲಕುಞÂ ಚೆರ್ಕಳ, ಚುನಾವಣಾ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್ ಮತ್ತು ಕಿರಿಯ ಅಧೀಕ್ಷಕ ಎ. ರಾಜೀವನ್ ಉಪಸ್ಥಿತರಿದ್ದರು.
ಎಸ್‍ಐಆರ್ ಪರಿಷ್ಕರಣೆಯ ನಂತರ ಪ್ರಕಟಗೊಂಡ ಮತದಾರರ ಕರಡುಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಕೆ. ಇನ್ಬಾಶೇಖರ್ ಹಸ್ತಾಂತರಿಸಿದರು
.


