ಕುಂಬಳೆ: ನಾಪತ್ತೆಯಾಗಿದ್ದ ಬಂಬ್ರಾಣ ನಿವಾಸಿ, ಮಸೀದಿಯಲ್ಲಿ ಉಸ್ತಾದ್ ಆಗಿರುವ ಮಹಮ್ಮದ್ ಶಫೀಕ್(32)ನನ್ನು ಉಳ್ಳಾಲದಿಂದ ಪೊಲೀಸರು ಪತ್ತೆಹಚ್ಚಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಂತರ ಪತ್ನಿಯ ಜತೆ ಕಳುಹಿಸಿಕೊಡಲಾಗಿದೆ. ಮಹಮ್ಮದ್ ಶಫೀಕ್ ಅವರು ಡಿ. 21ರಂದು ರಾತ್ರಿ ಬಂಬ್ರಾಣ ಮಸೀದಿಗೆಂದು ಮನೆಯಿಂದ ಹೊರಟವರು, ಮನೆಗೆ ವಾಪಸಾಗದೆ ನಾಪತ್ತೆಯಾಗಿರುವ ಬಗ್ಗೆ ಪತ್ನಿ ನಜ್ಮುನ್ನೀಸಾ Pನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮಹಮ್ಮದ್ ಶಫೀಕ್ ಅವರ ಸ್ಕೂಟರ್ ಕುಂಬಳೆ ರೈಲ್ವೆ ನಿಲ್ದಾಣ ಸನಿಹದಿಂದ ಪತ್ತೆಹಚ್ಚಿ, ಇದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಇವರುಯಾವ ಉದ್ದೇಶಕ್ಕೆ ಮನೆ ಬಿಟ್ಟಿದ್ದಾರೆ ಹಾಗೂ ಎಲ್ಲಿಗೆ ತೆರಳಿದ್ದರು ಎಂಬ ಬಗ್ಗೆ ಮಾಹಿತಿಲಭ್ಯವಾಗಿಲ್ಲ.

