ಕಾಸರಗೋಡು: ತನ್ನ ನಾಲ್ಕುವರೆ ವರ್ಷ ಪ್ರಾಯದ ಪುತ್ರಿಯೊಂದಿಗೆ ನಾಪತ್ತೆಯಾಗಿ ನಂತರ ನ್ಯಾಯಾಲಯಕ್ಕೆ ಹಾಜರಾದ ಗೃಹಿಣಿ, ಪುತ್ರಿಯನ್ನು ಪತಿಯ ಕೈಗಿತ್ತು ಪ್ರಿಯತಮನೊಂದಿಗೆ ತೆರಳಿದ್ದಾಳೆ. ದೇಲಂಪಾಡಿ ಪಂಚಾಯಿತಿಯ ಮಯ್ಯಳ ನಿವಾಸಿ,ಎಸ್.ಎ ಕಾವ್ಯಾ ತನ್ನ ಪ್ರಿಯತಮ ಅಣ್ಣಪ್ಪಾಡಿ ನಿವಾಸಿ ಅಶ್ವಥ್ ಜತೆ ತೆರಳಿದವಳು. ಡಿ. 22ರಂದು ಕಾವ್ಯಾ ತನ್ನ ಪುತ್ರಿಯ ಜತೆ ಮನೆಯಿಮದ ತೆರಳಿದವಳು ನಾಪತ್ತೆಯಾಗಿದ್ದು, ಈ ಬಗ್ಗೆ ಪತಿ ಆದೂರು ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುವ ಮಧ್ಯೆ ಕಾವ್ಯಾ ಪ್ರಿಯತಮನ ಜತೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ತನ್ನಿಚ್ಛೆ ಪ್ರಕಾರ ನಡೆದುಕೊಳ್ಳುವಂತೆ ನ್ಯಾಯಾಲಯ ತೀರ್ಪು ನೀಡಿತ್ತು.

