ಕಾಸರಗೋಡು: ಕೋಮುವಾದ ರಾಜಕೀಯದ ವಿರುದ್ಧ ಪ್ರೀತಿಯ ಕ್ಯಾರೋಲ್‍ಗಳನ್ನು ಹಾಡುವ ಮೂಲಕ ಕ್ರಿಸ್‍ಮಸ್ ಆಚರಣೆಯನ್ನು ಆಯೋಜಿಸಲಾಯಿತು. ಕಾಸರಗೋಡು ಪ್ರಧಾನ ಅಂಚೆ ಕಚೇರಿಯ ಮುಂದೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ನೌಕರರ ಒಕ್ಕೂಟದ ಕಾಸರಗೋಡು ಜಿಲ್ಲಾ ಸಮಿತಿ ಮತ್ತು ರಾಷ್ಟ್ರೀಯ ಅಂಚೆ ನೌಕರರ ಒಕ್ಕೂಟದ ಕಾಸರಗೋಡು ವಿಭಾಗದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಜಾಸತ್ತಾತ್ಮಕ ಮಹಿಳಾ ಸಂಘ ರಾಜ್ಯ ಸಮಿತಿ ಸದಸ್ಯೆ ಇ. ಪದ್ಮಾವತೀ ಉದ್ಘಾಟಿಸಿದರು.
ಸಂಘಟನೆ ಕಾರ್ಯದರ್ಶಿ ಪಿ ವಿ ಶರತ್ ಅಧ್ಯಕ್ಷತೆ ವಹಿಸಿದ್ದರು. ಸಿ ರಾಘವನ್, ಕೆ ಉನ್ನಿಕೃಷ್ಣನ್, ಕೆ ಆರ್ ಬಾಬುರಾಜನ್, ಕೆ ವಿ ವಿನ್ಸೆಂಟ್, ಲಲಿತಾಭಾಯಿ ಮತ್ತು ಓ ರಾಜೀವನ್ ಉಪಸ್ಥಿತರಿದ್ದರು. ಎಂ. ವಿಪಿನ್ ಸ್ವಾಗತಿಸಿದರು. ವಿ ವಿ ರಾಜನ್ ವಂದಿಸಿದರು.

