ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ ಚುನಾವಣಾ ಫಲಿತಾಂಶದ ಅವಲೋಕನಾ ಸಭೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಸಭಾಂಗಣದಲ್ಲಿ ನಡೆಯಿತು. ಬಿಜೆಪಿ ರಾಜ್ಯ ಕೋಶ ಸಂಯೋಜಕ ವಿ.ಕೆ. ಸಜೀವನ್ ಸಮಾರಂಭ ಉದ್ಘಾಟಿಸಿದರು.ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸತೀಶ್ ಚಂದ್ರ ಭಂಡಾರಿ, ಜಿಲ್ಲಾಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ರಾಮಪ್ಪ ಮಂಜೇಶ್ವರಂ, ಸವಿತಾ ಟೀಚರ್, ಎ.ವೇಲಾಯುಧನ್, ಉತ್ತರ ವಲಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜಿ. ಕಾಶಿನಾಥ್, ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್.ಬಾಬುರಾಜ್, ಮನುಲಾಲ್ ಮೇಲತ್, ಪ್ರಾದೇಶಿಕ ಉಪಾಧ್ಯಕ್ಷ ವಿಜಯ್ ಕುಮಾರ್ ರೈ ಮತ್ತು ಹೊಸದಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.


