ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿ ಕುರೆಡ್ಕದಲ್ಲಿ ಧನ್ವಂತರಿ ಟ್ಯೂಷನ್ ಕೇಂದ್ರ ಕೆ.ಪಿ.ಮದನ ಮಾಸ್ಟರ್ ಸ್ಮಾರಕ ಗ್ರಾಮೀಣ ಗ್ರಂಥಾಲಯ ವಠಾರದಲ್ಲಿ ಆರಂಭಗೊಂಡಿತು. ಕಾಸರಗೋಡು ಧನ್ವಂತರಿ ಕೇಂದ್ರ ಸಹಕಾರದಲ್ಲಿ ಕಾಸರಗೋಡು ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಕೇಂದ್ರ ಕಾರ್ಯಾಚರಿಸಲಿದೆ.
ಗ್ರಾಮ ಪಂಚಾಯಿತಿ ಸದಸ್ಯೆ ಸೌದಾಬಿ ಹನೀಫ್ ಕೇಂದ್ರ ಉದ್ಘಾಟಿಸಿ ಮಾತನಾಡಿ, ಒಬ್ಬ ವ್ಯಕ್ತಿಯ ಪ್ರಗತಿಗೆ ಶಿಕ್ಷಣ ಮೊದಲ ಹೆಜ್ಜೆಯಾಗಿದ್ದು, ವಿಧ್ಯಾಬ್ಯಾಸದಲ್ಲಿ ಹಿಂದುಳಿದವರನ್ನು ಗುರುತಿಸಿ, ಅವರನ್ನು ಶೈಕಷಣಿಕವಾಗಿ ಬೆಳೆಸುವಲ್ಲಿ ಇಂತಹ ಕೇಂದ್ರಗಳು ಮಹತ್ವದ ಯೋಜನೆಯಾಗಿದೆ ಎಂದು ತಿಳಿಸಿದರು. ಗ್ರಂಥಪಾಲಕಿ ಶಾರದಾ ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದರು. ಎಸ್‍ಟಿ ಪೆÇ್ರಮೋಟರ್ ಜ್ಞಾನ ಕಿರಣ್ ಸ್ವಾಗತಿಸಿದರು. ಅಶೋಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗಾಗಿ ಟ್ಯೂಷನ್ ಕೇಂದ್ರ ಕಾರ್ಯಾಚರಿಸಲಿದ್ದು, ಪ್ರತಿ ದಿನ ಸಂಜೆ 4 ರಿಂದ 6 ಗಂಟೆಯವರೆಗೆ ತರಗತಿ ನಡೆಯಲಿರುವುದು.


