ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ ಮತ್ತು ಬೀಳ್ಕೊಡುಗೆ ಸಮಾರಂಭ ಗುರುವಾರ ನಡೆಯಿತು. ಮುಖ್ಯ ಶಿಕ್ಷಕಿ ಚಿಗುರುಪಾದೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯಿತಿ ನೂತನ ಸದಸ್ಯೆ ನಾಝಿಯಾ ಅಸೀಸ್ ಉದ್ಘಾಟಿಸಿ ಶಾಂತಿ, ನೆಮ್ಮದಿ, ತಾಳ್ಮೆ, ಸಹನೆಯ ಸಂದೇಶ ನಿಡಿ ಹೊಸವರ್ಷದ ಶುಭಹಾರೈಸಿದರು. ಬಿ.ಆರ್.ಸಿ. ತರಬೇತುದಾರೆ ಸುಮಯ್ಯ ಟೀಚರ್, ಪಿ.ಟಿ.ಎ. ಉಪಾಧ್ಯಕ್ಷ ಇಂತಿಯಾಸ್, ಹಿರಿಯ ಶಿಕ್ಷಕ ರಿಯಾಜ್ ಪೆರಿಂಗಡಿ ಉಪಸ್ಥಿತರಿದ್ದರು. ಮಂಜೇಶ್ವರದ ಬಿ.ಆರ್.ಸಿ.ಯಾಗಿ ಸೇವೆ ಸಲ್ಲಿಸುತ್ತಿರುವ ಸುಮಾದೇವಿ ಅವರು ಮರಳಿ ಮಾತೃ ಶಾಲೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಗಣ್ಯರ ಸಮಕ್ಷಮ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಿಕ್ಷಕಿ ಜಸೀಲಾ ಗೀತೆಗಳ ಗಾಯನ ನಡೆಸಿದರು. ಸಾಂತಾಕ್ಲಾಸ್ ನೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು. ಶಿಕ್ಷಕ ಅಬ್ದುಲ್ ಬಶೀರ್ ಸ್ವಾಗತಿಸಿ, ಆಯಿಷತ್ ಸೈನಾಸ್ ವಂದಿಸಿದರು.

.jpg)
