HEALTH TIPS

ರಾಜ್ಯ ರಾಜಧಾನಿಯಲ್ಲಿ ಮೇಯರ್ ಆಯ್ಕೆ ಪ್ರಕ್ರಿಯೆ ಚುರುಕು-ಪ್ರಧಾನಿ ಭೇಟಿ ಸಾಧ್ಯತೆ

ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರ ಮಹಾನಗರಪಾಲಿಕೆಯನ್ನು ಗೆದ್ದು ಐವತ್ತು ವರ್ಷಗಳ ಎಡರಂಗದ ಆಡಳಿತಕ್ಕೆ ಅಂತ್ಯಹಾಡಿದ ಬಿಜೆಪಿ ಸಾಧನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರಮೋದಿ ತಿರುವನಂತಪುರಕ್ಕೆ ಖುದ್ದುಭೇಟಿ ನಿಡುವ ಭರವಸೆ ವ್ಯಕ್ತಪಡಿಸಿರುವುದಾಗಿ ಕೇರಳದ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ತಿರುವನಂತಪುರ ಮೇಂiÀiರ್ ಆಯ್ಕೆ ಬಗ್ಗೆ   ರಾಜ್ಯ ಸಮಿತಿ ಅಧ್ಯಕ್ಷ ರಾಜೀವ್‍ಚಂದ್ರಶೇಖರ್ ದೆಹಲಿಗೆ ತೆರಳಿಹಿರಿಯಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. 


ತಿರುವನಂತಪುರ ನಗರ ಪಾಲಿಕೆಯ ಆಡಳಿತಕ್ಕೇರಲು ಚುನಾವಣಾ ಪೂರ್ವದಲ್ಲೇ ಬಿಜೆಪಿ ಸಿದ್ಧತೆ ನಡೆಸಿದ್ದು, ಬಿಜೆಪಿ ಅಧಿಕಾರಕ್ಕೇರಿದಲ್ಲಿ, ತಿರುವನಂತಪುರದ ಅಭಿವೃದ್ಧಿಗೆ ಸ್ಪಷ್ಟ ಯೋಜನೆಗಳ ರೂಪುರೇಷೆಯನ್ನು ಬಿಜೆಪಿ ತಯಾರಿಸಲಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ಯೋಜನಾ ರೂಪುರೇಷೆ ಬಿಡುಗಡೆಗೊಳಿಸಲಿದ್ದಾರೆ.   

ತಿರುವನಂತಪುರ ಮಹಾನಗರಪಾಲಿಕೆಯ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಂದರ್ಭ ಪ್ರಧಾನಿ ತಿರುವನಂತಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು,   ಈ ಹಿನ್ನೆಲೆಯಲ್ಲಿ ಮುಂದಿನ ಒಂದೆರಡು ದಿನದಲ್ಲಿ ನೂತನ ಮೇಯರ್ ಯಾರೆಂಬುದು ನಿರ್ಣಯವಾಗಲಿದೆ.

ತಿರುವನಂತಪುರದ ಬಿಜೆಪಿ ಗೆಲುವು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದ್ದು,  ಕೇರಳದಲ್ಲಿ ಇದು ಮಹತ್ವದ ಬದಲಾವಣೆಗೆ ಹಾದಿಮಾಡಿಕೊಡಲಿರುವುದಾಗಿ  ಬದಲಾವಣೆಯ ಸಂಕೇತ ಎಂಬ ಸೂಚನೆಯೊಂದಿಗೆ ರಾಷ್ಟ್ರ ಮಟ್ಟದಲ್ಲಿ ಇದನ್ನು ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ.

ಒಟ್ಟು 101 ಸೀಟುಗಳಿರುವ ತಿರುವನಂತಪುರ ಮಹಾನಗರಪಾಲಿಕೆಯಲ್ಲಿ ಎನ್‍ಡಿಎ 50ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಎಡರಂಗ 29, ಐಕ್ಯರಂಗ 19 ಹಾಗೂ ಇತರರಿಗೆ ಎರಡು ಸ್ಥಾನ ಲಭಿಸಿದೆ. ತಿರುವನಂತಪುರ ವಿಳಿಞದಲ್ಲಿ ಮತದಾನ ಮುಂದೂಡಲಾಗಿತ್ತು.  ಬಹುಮತಕ್ಕೆ 51ಸೀಟುಗಳ ಅಗತ್ಯವಿದ್ದು, ಇಲ್ಲಿ ಇಬ್ಬರು ಸ್ವತಂತ್ರ ಅಭ್ಯರ್ಥಿಗಳ ನಿಲುವು ನಿರ್ಣಾಯಕವಾಗಲಿದೆ. ಕಳೆದ ಐವತ್ತು ವರ್ಷಗಳಿಂದ ಇಲ್ಲಿ ಎಡರಂಗ ಆಡಳಿತ ನಡೆಸುತ್ತಿದೆ. ತಿರುವನಂತಪುರ ಮಹಾನಗರಪಾಲಿಕೆಯಲ್ಲಿ ಕಳೆದಬಾರಿ 35ಸೀಟು ಹೊಂದಿದ್ದ ಎನ್‍ಡಿಎ ಈ ಬಾರಿ 50ಸೀಟುಗಳಲ್ಲಿ ಗೆಲುವು ಸಾಧಿಸಿದೆ.   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries