ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಕೊಡ್ಲಮೊಗರು : ನವಪ್ರಭಾ ಕಾರ್ಯಕ್ರಮ ಉದ್ಘಾಟನೆ
ಮಂಜೇಶ್ವರ: ಕೇರಳ ರಾಜ್ಯ ಸರಕಾರ ನಡೆಸುವ 9 ನೇ ತರಗತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ "ನವಪ್ರಭಾ" ಎಂಬ ಕಾರ್ಯಕ್ರಮವನ್ನು ಕೊಡ್ಲಮೊಗರಿನ ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮ್ಮರ್ ಬೋರ್ಕಳ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಹದಿಹರೆಯದ ಪ್ರಾಯದಲ್ಲಿ ಹುಡುಗರು ಎದುರಿಸುವ ಶಾರೀರಿಕ, ಮಾನಸಿಕ, ಭಾವನಾತ್ಮಕ ಸಮಸ್ಯೆಗಳ ಕುರಿತು ಕೃಷ್ಣವೇಣಿ ತರಗತಿಯನ್ನು ನಡೆಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಭಾರತಿ ಸ್ವಾಗಿತಿಸಿ, ನವಪ್ರಭಾ ಯೋಜನೆಯ ಶಾಲಾ ಸಂಚಾಲಕ ರಾಮಕೃಷ್ಣ ಭಟ್ ಪ್ರಸ್ತಾವಿಕ ಮಾತನಾಡಿದರು. ಚಂದ್ರ ಕುಮಾರ್ ವಂದಿಸಿದರು. ಬಾಲಚಂದ್ರ, ಸೌಮ್ಯಾ, ಪುಷ್ಪಲತಾ, ಶ್ಯಾಂಭಟ್ ಉಪಸ್ಥಿತರಿದ್ದರು.





