ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಡೋನ್ ಬೋಸ್ಕೊ ಶಾಲೆಗೆ ಕ್ರೀಡಾ ಪ್ರಶಸ್ತಿ
ಉಪ್ಪಳ: ಉಪ್ಪಳದಲ್ಲಿ ಇತ್ತೀಚೆಗೆ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಯ್ಯಾರಿನ ಡೋನ್ ಬೋಸ್ಕೊ ಎ.ಯು.ಪಿ. ಶಾಲಾ ಯು.ಪಿ. ಕಿಡ್ಡೀಸ್ ವಿಭಾಗದ ಸಮಗ್ರ ಪ್ರಶಸ್ತಿ ಹಾಗೂ ಎಲ್.ಪಿ. ಕಿಡ್ಡೀಸ್ ವಿಭಾಗದ ರನ್ನಸರ್್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆರನೇ ತರಗತಿಯ ರಕ್ಷಾ ಆರ್.ಎಸ್. 100 ಮೀಟರ್ ಓಟ ಪ್ರಥಮ, 200 ಮೀಟರ್ ಓಟ ದ್ವಿತೀಯ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪ್ಯನ್ಶಿಪ್ ಪಡೆದುಕೊಂಡಿದ್ದಾಳೆ.
ಕಿರಿಯ ಪ್ರಾಥಮಿಕ ಕಿಡ್ಡೀಸ್ ಹುಡುಗರ ವಿಭಾಗದಲ್ಲಿ 4 ನೇ ತರಗತಿಯ ವಿಕ್ಯಾತ್ ಉದ್ದ ಜಿಗಿತ ಪ್ರಥಮ, 100 ಮೀಟರ್ ಓಟ ದ್ವಿತೀಯ ಸ್ಥಾನ, ಎಲ್.ಪಿ. ಕಿಡ್ಡೀಸ್ ಹುಡುಗಿಯರ ವಿಭಾಗದಲ್ಲಿ ಉದ್ದ ಜಿಗಿತ ಮರಿಯಮ್ಮತ್ ಜುಮಾನ ದ್ವಿತೀಯ ಸ್ಥಾನ, ಶೃಜ್ಞಾಶ್ರೀ, ರೈಫಾ, ತನುಶ್ರೀ ಮತ್ತು ಮರಿಯಮ್ಮತ್ ಜುಮಾನ ರಿಲೇ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಿರಿಯ ಪ್ರಾಥಮಿಕ ಕಿಡ್ಡೀಸ್ ವಿಭಾಗ 100 ಮೀಟರ್ ರಿಲೇಯಲ್ಲಿ ಫ್ರಾಂಕ್ಲೀನ್, ಹಷರ್ಿತ್, ಹಿತೇಶ್, ಅಲನ್ ಪ್ರಥಮ ಸ್ಥಾನ, 100 ಮೀಟರ್ ರಿಲೇಯಲ್ಲಿ ರಕ್ಷಾ, ಸಂಜನಾ, ಅಫ್ನಾ ಮತ್ತು ಅರನ್ಯಾ ಪ್ರಥಮ ಸ್ಥಾನ, ಸಬ್ ಜೂನಿಯರ್ ಹುಡುಗಿಯರ ವಿಭಾಗದ ಹೈಜಂಪ್ ಸ್ಪಧರ್ೆಯಲ್ಲಿ ಅಂಜೆಲ್ ಕ್ರಾಸ್ತ ಪ್ರಥಮ ಸ್ಥಾನ ಪಡೆದಿದ್ದಾಳೆ.
ಪ್ರಶಸ್ತಿ ಪಡೆದ ವಿದ್ಯಾಥರ್ಿಗಳಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಿದಾನಂದ ಮಯ್ಯ ಹಾಗೂ ಮುಖ್ಯೋಪಾಧ್ಯಾಯ ಲೂವಿಸ್ ಮೋಂತೆರೋ ಅವರು ಪ್ರಶಸ್ತಿ ವಿತರಿಸಿ ಅಭಿನಂದನೆಯನ್ನು ಸಲ್ಲಿಸಿದರು. ಶಾಲಾ ಮಕ್ಕಳ ಈ ಸಾಧನೆಗೆ ಶಾಲಾ ಸಂಚಾಲಕ ವಂದನೀಯ ಸ್ವಾಮಿ ವಿಕ್ಟರ್ ಡಿ'ಸೋಜ, ರಕ್ಷಕರು ಶಿಕ್ಷಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.





