ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಕೊಡ್ಲಮೊಗರಿನಲ್ಲಿ `ನಿರೆಲ್' ಬಸ್ ನಿಲ್ದಾಣ ಉದ್ಘಾಟನೆ
ಮಂಜೇಶ್ವರ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡ್ಲಮೊಗರು ಇದರ ಆಶ್ರಯದಲ್ಲಿ ಕ್ಲಬ್ನ 7ನೇ ವರ್ಷದ ಪಾದಾರ್ಪಣೆಯ ಸವಿನೆನಪಿನ ಕಾಣಿಕೆಯಾಗಿ ಕೊಡ್ಲಮೊಗರಿನಲ್ಲಿ `ನಿರೆಲ್' (ದೊಂಬುಗು ದೆಂಗೆರೆ ಪಾರ್ ಬಲೇ....) ಎಂಬ ನೂತನ ಅತ್ಯಾಧುನಿಕ ಬಸ್ ತಂಗುದಾಣದ ಉದ್ಘಾಟನಾ ಸಮಾರಂಭ ಮತ್ತು ಸರ್ವ ಧರ್ಮ ಸಮ್ಮಿಲನ ಕಾರ್ಯಕ್ರಮವು ಶನಿವಾರ ಜರಗಿತು.
ಧರ್ಮನಗರ ಮಣವಾಠಿ ಬೀವಿ ಆಂಗ್ಲ ಮಾಧ್ಯಮ ಶಾಲಾ ಮದ್ರಸಾ ಮುಖ್ಯೋಪಾಧ್ಯಾಯ ಸಯ್ಯದ್ ಸಂಶುದ್ದೀನ್ ತಂಙಳ್ ಅವರು ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಬೆಳವಣಿಗೆಯಲ್ಲಿ ಸಮಾಜದ ಪಾತ್ರ ಬಹು ದೊಡ್ಡದಿದೆ. ಅದರ ಋಣವನ್ನು ಪೂರ್ಣವಾಗಿ ತೀರಿಸಲು ಅಸಾಧ್ಯವಾದರೂ ಈ ತೆರನಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದರಿಂದ ಕಿಂಚಿತ್ತಾದರೂ ಸೇವೆ ಸಲ್ಲಿಸಿದಂತಾಗುವುದು ಎಂದು ಹೇಳಿದರು.
ದೀಪಾವಳಿಯ ಬೆಳಕಿನ ಪ್ರಖರತೆಯಲ್ಲಿ ಸರ್ವಧರ್ಮಗಳ ಬಿಂಬ ಬೆಸುಗೆಯಾಗಲಿ. ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು , ಭಾರತಾಂಬೆಯ ಮಕ್ಕಳಾದ ನಾವು ರಾಷ್ಟ್ರದ ಪ್ರಗತಿಗಾಗಿ ಟೊಂಕಕಟ್ಟಿ ಶ್ರಮಿಸಬೇಕು. ಅನ್ಯದೇಶಗಳಿಂದ ಆಕ್ರಮಣವಾದಲ್ಲಿ ಸಶಕ್ತ ರೀತಿಯಲ್ಲಿ ಎದುರಿಸಬೇಕು. ಸಂದರ್ಭ ಬಂದಲ್ಲಿ ರಾಷ್ಟ್ರದ ಜವಾನರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕೆಂದು ತಿಳಿಸಿದರು.
ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ದೀಪಬೆಳಗಿಸಿ ಮಾತನಾಡಿ, ಋಷಿಮೂಲಕ್ಕೆ ವಂದಿಸಿ, ಜ್ಞಾನವಿಜ್ಞಾನಗಳನ್ನು ಮೈಗೂಡಿಸಿಕೊಂಡು ಕೃಷಿ ಪರಂಪರೆಗೆ ಮಾನ್ಯತೆ ಆದ್ಯತೆಯನ್ನು ನೀಡಿ ಅಭಿವೃದ್ಧಿಯ ಪಥದೊಂದಿಗೆ ಮುನ್ನಡೆಯಬೇಕೆಂದು ಕರೆ ನೀಡಿದರು. ಸರಕಾರ ಮತ್ತು ಪಂಚಾಯತಿಯಿಂದ ದೊರಕುವ ಸವಲತ್ತುಗಳನ್ನು ಜನರಿಗೆ ದೊರಕಿಸಿಕೊಡುವಲ್ಲಿ ಸಂಘ ಸಂಸ್ಥೆಗಳು ಶಕ್ತಿಮೀರಿ ಶ್ರಮಿಸಿದಾಗ ರಾಮರಾಜ್ಯದ ಕನಸು ನನಸಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಕರ್ಾಡಿ ಸೇಕ್ರೆಡ್ ಹಾಟರ್್ ಆಫ್ ಜೀಸಸ್ ಚಚರ್್ನ ಬ್ರದರ್ ಪ್ರೇಮ್ಜೀತ್ ಮಾತನಾಡಿ, ಸವರ್ೇ ಜನ: ಸುಖಿನೋ ಭವಂತು ಎಂಬ ತತ್ವದಂತೆ ದೊಂಬುಗು ದೆಂಗೆರೆ ಪಾರ್ ಬಲೇ.... ಎಂಬ ಮಾತು ವಿಶಾಲ ಅರ್ಥವನ್ನು ಹೊಂದಿದ್ದು, ಸಮಾಜದ ಇತರರಿಗೆ ಈ ವ್ಯವಸ್ಥೆಯು ಮಾದರಿಯಾಗಲಿದೆ ಎಂದರು. ಬಸ್ ತಂಗುದಾಣದಂತಹ ಸಮಾಜ ಸೇವಾ ಯೋಜನೆಗಳನ್ನು ಜಾರಿಗೊಳಿಸಿದಾಗ ಪ್ರತಿ ಊರು ಪ್ರಗತಿಯಾಗಿ ನಾಡು ಸುಭಿಕ್ಷೆಯಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಮುಂದಾಳು ವಿಠಲದಾಸ್ ಭಂಡಾರಿ ಕೊಡ್ಲಮೊಗರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹರೀಶ್ಕುಮಾರ್ ಪಾತೂರಾಯ, ಶೇಖರ ಶೆಟ್ಟಿ ಕೊಡ್ಲಮೊಗರು, ವಕರ್ಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ., ದೇವಪ್ಪ ಶೆಟ್ಟಿ ಚಾವಡಿಬೈಲು ಗುತ್ತು, ಚಂದ್ರಹಾಸ ಶೆಟ್ಟಿ ಕಣಿಯೂರು ಮುಂತಾದವರು ಉಪಸ್ಥಿತರಿದ್ದರು. ರವಿಕುಮಾರ್ ಕೊಡ್ಲಮೊಗರು ಸ್ವಾಗತಿಸಿ, ಕೇಶವ ಕುಲಾಲ್ ವಂದಿಸಿದರು. ಸತೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.





