ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಮಧೂರು: ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಅದರ ಗತವೈಭವವನ್ನು ಮತ್ತೆ ಕಾಣುವಂತೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ ಎಂದು ಕನರ್ಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಭಾನುವಾರ ಆಗಮಿಸಿದ್ದ ಅವರು ಕೂಡ್ಲು ಶ್ರೀಗೋಪಾಲಕೃಷ್ಣ ಫ್ರೌಢಶಾಲೆಗೆ ವಿಶೇಷ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಗಡಿನಾಡಿನ ಅತ್ಯಂತ ಹಳೆಯ ಶಾಲೆಗಳ ಪೈಕಿ ಒಂದಾಗಿರುವ ಕೂಡ್ಲು ಗೋಪಾಲಕೃಷ್ಣ ಕನ್ನಡ ಮಾಧ್ಯಮ ಶಾಲೆಯ ಸಮಗ್ರ ಅಭಿವೃದ್ದಿಗೆ ಎಲ್ಲರೂ ಪ್ರಯತ್ನಿಸಬೇಕು. ಫ್ರೌಢಶಾಲೆಗೆ ಅಗತ್ಯ ಪೀಠೋಪಕರಣಗಳು ಮತ್ತು ಕಲಿಕೋಪಕರಣಗಳನ್ನು ಒದಗಿಸಲು ಅಗತ್ಯದ ಆಥರ್ಿಕ ನೆರವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮೂಲಕ ನೀಡಲಾಗುವುದೆಮದು ಅವರು ಭರವಸೆ ನೀಡಿದರು.
ಖ್ಯಾತ ಸಾಹಿತಿ ಡಾ.ಸಿದ್ದಲಿಂಗಯ್ಯ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದಶರ್ಿ ಡಾ.ಕೆ.ಮುರಳೀಧರ, ಖ್ಯಾತ ಗಾಯಕ ಡಾ.ಕೃಷ್ಣಮೂತರ್ಿ ಕಿಕ್ಕೇರಿ ಮೊದಲಾದವರು ಜೊತೆಯಲ್ಲಿದ್ದರು. ಶಾಲಾ ಪ್ರಬಂಧಕ ಕೆ.ಜಿ.ಶ್ಯಾನುಭೋಗ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪಾರೆಕಟ್ಟೆ, ಮುಖ್ಯೋಪಾಧ್ಯಾಯ ಶ್ರೀಹರಿ ಎನ್, ಶಾಲಾ ಸಿಬ್ಬಂಧಿ ಸಂಘದ ಕಾರ್ಯದಶರ್ಿ ಎ.ವಿಷ್ಣು, ಎಸ್.ಎನ್.ಶಾನುಭೋಗ್, ಉಮೇಶ್ ಎಂ.ಸಾಲ್ಯಾನ್, ರಮೇಶ್ಚಂದ್ರ ಮೊದಲಾದವರು ಉಪಸ್ಥಿತರಿದ್ದು, ಶಾಲೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.





