ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಕೊಡ್ಲಮೊಗರು ವಾಣೀ ವಿಜಯ ಎ.ಯು.ಪಿ ಶಾಲೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ:
ಮಂಜೇಶ್ವರ: ಕೊಡ್ಲಮೊಗರಿನ ಶ್ರೀ ವಾಣೀ ವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಶ್ರೀ ವಾಣೀ ವಿಜಯ ಎ.ಯು.ಪಿ ಶಾಲಾ ಹಳೆ ವಿದ್ಯಾಥರ್ಿ ಸಂಘ ಹಾಗೂ ಕಲ್ಲೂರು ಎಜುಕೇಶನಲ್ ಟ್ರಸ್ಟ್ ಕಾರವಾರ ಇವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ಪದ್ಮನಾಭ ಕೆ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಾಣೀ ವಿಜಯ ಎ.ಯು.ಪಿ ಶಾಲಾ ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಗೋವಿಂದ ರಾಮ ಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎಂ.ಸಿ.ಎಚ್ ಹೃದಯ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಅಮಿತ್ ಕಿರಣ್, ಸಿ.ಎಂ.ಒ ನುರಿತ ತಜ್ಞ ಕ್ಲಿನಿಕಲ್ ಕಾಡರ್ಿಯಾಲೊಜಿಸ್ಟ್ ಡಾ. ಮನೋಹರ ರೆವನ್ಕರ್, ಕಲ್ಲೂರು ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಇಬ್ರಾಹಿಂ ಕಲ್ಲೂರು ಉಪಸ್ಥಿತರಿದ್ದರು. ಅತಿಥಿಗಳಾಗಿ ಶ್ರೀ ವಾಣೀ ವಿಜಯ ಎ.ಯು.ಪಿ ಶಾಲಾ ಮಖ್ಯೋಪಾಧ್ಯಾಯಿನಿ ಪದ್ಮನಯನ, ವಕರ್ಾಡಿ ಗ್ರಾಮ ಪಂಚಾಯತಿ ಸದಸ್ಯ ಗೋಪಾಲಕೃಷ್ಣ ಪಜ್ವ ಉಪಸ್ಥಿತರಿದ್ದರು. ಹಳೆ ವಿದ್ಯಾಥರ್ಿ ಸಂಘದ ಕಾರ್ಯದಶರ್ಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕ ಗುರುರಾಜ್ ವಂದಿಸಿದರು. ಅಧ್ಯಾಪಕ ಶಿವಪ್ರಸಾದ್ ನಿರೂಪಿಸಿದರು. ಬಳಿಕ ನಡೆದ ವಿವಿಧ ತಪಾಸಣೆಯ ಉದ್ಘಾಟನೆಯನ್ನು ಡಾ. ಅಮಿತ್ ಕಿರಣ್ ನೆರವೇರಿಸಿದರು. ಹೃದಯ, ನರರೋಗ, ಎಲುಬು ಮತ್ತು ಮಧುಮೇಹ ರೋಗಗಳ ತಪಾಸಣೆಯನ್ನು ಡಾ. ಅಮಿತ್ ಕಿರಣ್ ಹಾಗೂ ಡಾ. ಮನೋಹರ್ ರೆವನ್ಕರ್ ಜೊತೆಗೆ ಡಾ. ನಿಖಿಲ್, ಡಾ.ಅಖಿಲ್, ಡಾ. ಸ್ಟಾನಿ, ಡಾ. ಆಕರ್ೋ ಮೊದಲಾದ ನುರಿತ ತಜ್ಞರು ತಪಾಸಣೆ ನಡೆಸಿದರು. ಅಗತ್ಯ ಇದ್ದವರಿಗೆ ಇ.ಸಿ.ಜಿ ಹಾಗೂ ಎಕೋ (ಇಸಿಎಚ್ಓ)ಮಾಡಲಾುತು. ನೂರಕ್ಕಿಂತಲೂ ಮಿಕ್ಕಿದ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.





