ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಸೌರ ವಿದ್ಯುತ್ ಯೋಜನೆಗೆ 250 ಎಕ್ರೆ ಭೂಮಿ ನೀಡಲು ಸಚಿವ ಸಂಪುಟ ನಿಧರ್ಾರ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೌರ ವಿದ್ಯುತ್ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಾತ್ರವಲ್ಲದೆ ಅದಕ್ಕಾಗಿ ಹೊಸದುರ್ಗ ತಾಲೂಕಿನಲ್ಲಿ ಹೆಚ್ಚುವರಿಯಾಗಿ ಇನ್ನೂ 250 ಎಕ್ರೆ ಜಮೀನು ಬಿಟ್ಟುಕೊಡಲು ಕೇರಳ ಸಚಿವ ಸಂಪುಟ ಸಭೆಯಲ್ಲಿ ತೀಮರ್ಾನಿಸಲಾಗಿದೆ.
ಇದು ಕಂದಾಯ ಇಲಾಖೆಗೆ ಸೇರಿದ ಭೂಮಿಯಾಗಿದ್ದು, ಅದನ್ನು ಗೇಣಿ ಆಧಾರದಲ್ಲಿ ರಿವ್ಯೂಲೇಬಲ್ ಪವರ್ ಕಾಪರ್ೋರೇಶನ್ ಆಫ್ ಕೇರಳಕ್ಕೆ ಬಿಟ್ಟು ಕೊಡಲು ನಿಧರ್ಾರ ಕೈಗೊಳ್ಳಲಾಗಿದೆ. ಆದರೆ ಈ ಭೂಮಿಯ ಮಾಲಕತ್ವ ಕಂದಾಯ ಇಲಾಖೆಯ ಕೈಯಲ್ಲೇ ಉಳಿದುಕೊಳ್ಳಲಿದೆ ಎಂದು ಸಚಿವ ಸಂಪುಟ ಸಭೆಯು ಸ್ಪಷ್ಟಪಡಿಸಿದೆ.
ಇಲ್ಲಿಯ ನಿವೇಶನವನ್ನು ಸೌರ ವಿದ್ಯುತ್ ಪ್ಯಾನಲ್ಗಳನ್ನು ಬಳಸಲು ಮಾತ್ರವೇ ವಿನಿಯೋಗಿಸಬೇಕೆಂಬ ನಿಬಂಧನೆಯನ್ನೂ ಹೇರಲು ಸರಕಾರವು ತೀಮರ್ಾನಿಸಿದೆ. ಹೊಸದುರ್ಗ ತಾಲೂಕಿನ ಅಂಬಲತ್ತರದಲ್ಲಿ ಸೌರ ಪ್ಯಾನಲ್ಗಳನ್ನು ಅಳವಡಿಸಿ ಆಂಶಿಕವಾಗಿ ವಿದ್ಯುತ್ ಉತ್ಪಾದನೆಯು ಈಗಾಗಲೇ ಆರಂಭಗೊಂಡಿದೆ.
ಅದರ ಹೊರತಾಗಿ ಈಗ ಈ ಯೋಜನೆಗಾಗಿ 250 ಎಕ್ರೆ ಭೂಮಿಯನ್ನು ಒದಗಿಸಲು ಸರಕಾರವು ನಿರ್ಧರಿಸಿದ್ದು, ಜೊತೆಗೆ ಪೈವಳಿಕೆ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಇಂತಹ ಸೌರ ವಿದ್ಯುತ್ ಸ್ಥಾವರ ಆರಂಭಿಸುವ ಕ್ರಮಕ್ಕೂ ಚಾಲನೆ ನೀಡಲಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು 200 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ವಿದ್ಯುತ್ ಮಂಡಳಿಯು ತಿಳಿಸಿದೆ.





