ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಅ.27ಕ್ಕೆ ರಾಷ್ಟ್ರಪತಿ ಕೇರಳಕ್ಕೆ
ಕಾಸರಗೋಡು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅ.27ರಂದು ತಿರುವನಂತಪುರಕ್ಕೆ ಆಗಮಿಸುವರು. ಅಂದು ಅಪರಾಹ್ನ 4ಗಂಟೆಗೆ ಟೆಕ್ನೋಸಿಟಿಯನ್ನು ರಾಷ್ಟ್ರಪತಿ ಉದ್ಘಾಟಿಸುವರು. ಅಲ್ಲದೆ ಐಟಿ ಕಟ್ಟಡ ಶಿಲಾನ್ಯಾಸವನ್ನೂ ನೆರವೇರಿಸುವರು. ಬಳಿಕ ಸಂಜೆ 6ಗಂಟೆಗೆ ತಿರುವನಂತಪುರ ಟೌನ್ ಹಾಲ್ನಲ್ಲಿ ರಾಷ್ಟ್ರಪತಿಯವರಿಗೆ ಪೌರ ಸಮ್ಮಾನ ನಡೆಯಲಿದೆ. ಅ.28ರಂದು ಕೊಚ್ಚಿಯಲ್ಲಿ ಜರಗುವ ಕೇರಳ ಹೈಕೋಟರ್್ನ ವಜ್ರ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಹೊಸದಿಲ್ಲಿಗೆ ತೆರಳುವರು.





