ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ದೀಪದ ಪ್ರಭಾವದಿಂದ ಆತ್ಮಜ್ಞಾನ ವಿಕಸನ - ಡಾ.ರವಿಪ್ರಸಾದ್
ಮುಳ್ಳೇರಿಯ: ದೀಪದ ಪ್ರಭಾವದಿಂದ ವ್ಯಕ್ತಿಯ ಆತ್ಮ ವಿಕಸನವಾಗುತ್ತದೆ. ಬಲಿಯೇಂದ್ರನ ವ್ಯಕ್ತಿತ್ವ ಅನುಕರಣೀಯ. ದೀಪಾವಳಿ ಆಚರಣೆಯ ಸಂಸ್ಕಾರಗಳು ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಮನಸ್ಸಿನ ಅಂಧಕಾರವನ್ನು ಜ್ಞಾನದ ಜ್ಯೋತಿಯ ಮೂಲಕ ದೂರ ಮಾಡುವ ಸಂಸ್ಕಾರ ನಮ್ಮ ಒಗ್ಗಟ್ಟಿಗೆ ಪ್ರೇರಕವಾಗುತ್ತದೆ. ಆದ್ದರಿಂದ ಧರ್ಮ ಹಾಗೂ ಸಂಸ್ಕಾರ ರಕ್ಷಣೆಯ ನಿಟ್ಟಿನಲ್ಲಿ ಧಾಮರ್ಿಕ ಆಚರಣೆಗಳು ಅಗತ್ಯ' ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ರವಿಪ್ರಸಾದ್ ಬೆಳ್ಳೂರು ಹೇಳಿದರು.
ಅವರು ಭಾನುವಾರ ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಶಿವಳ್ಳಿ ಬ್ರಾಹ್ಮಣ ಮುಳ್ಳೇರಿಯ ವಲಯ ಸಮಿತಿ ಆಶ್ರಯದಲ್ಲಿ ನಡೆದ ದೀಪೋತ್ಸವ ಕೂಟ -2017ರ ಸಮಾರೋಪ ಸಮಾರಂಭ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಯತರ್ಿಮಾರು ಕೃಷ್ಣ ಸರಳಾಯರು ಶಿವಳ್ಳಿ ವಾಟ್ಸ್ಅಪ್ ಗ್ರೂಪ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ಪರಸ್ಪರ ಸಂಪರ್ಕದ ಅಭುವೃದ್ಧಿಗೆ ವಿದ್ಯುನ್ಮಾನ ವ್ಯವಸ್ಥೆಗಳು ಪೂರಕವಾಗಿದೆ. ಅದನ್ನು ಆರೋಗ್ಯಕರ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಮುದಾಯಕ್ಕೆ ಅನುಕೂಲಕರವಾಗುವಂತಹ ವಿಚಾರಗಳನ್ನು ಅಪ್ಲೋಡ್ ಮಾಡುವ ಮೂಲಕ ಸಮಾಜದ ಪ್ರಗತಿಗೆ ಯತ್ನಿಸಬೇಕು' ಎಂದು ಹೇಳಿದರು.
ಸಭೆಯಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಬಿ ತಂತ್ರಿ ಅವರು ಮಾತನಾಡಿ, ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿಪೂಜೆ ಮಾಡುವುದರಿಂದ ಐಶ್ವರ್ಯವೃದ್ಧಿ ಹಾಗೂ ಗೋಪೂಜೆ ಮಾಡುವುದರಿಂದ ಆರೋಗ್ಯವೃದ್ಧಿಯಾಗುತ್ತದೆ. ಪ್ರತಿ ಮನೆಯಲ್ಲೂ ಗೋವಂಶ ಪ್ರಗತಿ ಕಾಣಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಮುಳ್ಳೇರಿಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಕೋಟೆಗದ್ದೆ ದಿನೇಶ್ ಕುಮಾರ್ ಅಡಿಗ ವಹಿಸಿದ್ದರು. ಈ ಸಂದರ್ಭದಲ್ಲಿ ಶಿವಳ್ಳಿ ಸಮುದಾಯದ ಮಕ್ಕಳಿಗಾಗಿ ಭಕ್ತಿಗೀತೆ, ಭಾಷಣ, ರಸಪ್ರಶ್ನೆ, ಸ್ಮರಣ ಶಕ್ತಿ,ರಂಗೋಲಿ, ಭಗವದ್ಗೀತೆ ಕಂಠಪಾಠ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ನೀಡಿ ಅಭಿನಂದಿಸಲಾಯಿತು. ಅನಂತರಾಮ ಕಡಂಬಳಿತ್ತಾಯ ಸ್ವಾಗತಿಸಿ, ರಾಜಾರಾಮ ಸರಳಾಯ ವಂದಿಸಿದರು. ಪ್ರಶಾಂತ್ ರಾಜ್ ವಿ ತಂತ್ರಿ ನಿರೂಪಿಸಿದರು. ನಂತರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಮುಳ್ಳೇರಿಯ ವಲಯ ಶಿವಳ್ಳಿ ಸಮುದಾಯದ ಅನೇಕ ಮಂದಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





