HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪದ್ಮಾವತಿ' ಬೆಂಬಲಕ್ಕೆ ನಿಂತ ಚಿತ್ರೋದ್ಯಮ: ಇಂದು 15 ನಿಮಿಷ ದೇಶಾದ್ಯಂತ ಚಿತ್ರೀಕರಣ ಬಂದ್ ಮುಂಬೈ: ಬಾಲಿವುಡ್ ನಿದರ್ೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತಿ ಚಿತ್ರದ ಬೆಂಬಲಕ್ಕೆ ನಿಂತಿರುವ ಭಾರತೀಯ ಚಿತ್ರೋದ್ಯಮದ ನೂರಾರು ಚಿತ್ರ ನಿಮರ್ಾಪಕರು ಹಾಗೂ ಕಾಮರ್ಿಕರು ಭಾನುವಾರ 15 ನಿಮಿಷಗಳ ಕಾಲ ಚಿತ್ರೀಕರಣ ಸ್ಥಗಿತಗೊಳಿಸುವ ಮೂಲಕ ಒಗ್ಗಟ್ಟು ಪ್ರದಶರ್ಿಸಲು ಮುಂದಾಗಿದ್ದಾರೆ. ಭಾರತೀಯ ಚಿತ್ರ ಮತ್ತು ಟಿವಿ ನಿದರ್ೇಶಕರ ಸಂಘ(ಐಎಪ್ ಟಿಡಿಎ) ಸೇರಿದಂತೆ ದೇಶಾದ್ಯಂತ ಒಟ್ಟು 19 ಚಿತ್ರೋದ್ಯಮ ಸಂಘಟನೆಗಳು, ಕ್ರಿಯಾತ್ಮಕ ವಲಯದಲ್ಲಿರುವ ನಿದರ್ೇಶಕರ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗಾಗಿ 15 ನಿಮಿಷಗಳ ಕಾಲ ಚಿತ್ರೀಕರಣ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ನನಗೆ ಸ್ವಾತಂತ್ರ್ಯ ಇದೆಯೇ? ಎಂಬ ಘೋಷಣೆಯಡಿ ಭಾರತೀಯ ಚಿತ್ರೋದ್ಯಮ ಪ್ರತಿಭಟನೆ ನಡೆಸುತ್ತಿದ್ದು, ಇದರಲ್ಲಿ ಸುಮಾರು 600-700 ಚಿತ್ರ ನಿಮರ್ಾಪಕರು, ಬರಹಗಾರರು, ಕಾಮರ್ಿಕರು ಭಾಗವಹಿಸುವ ಮೂಲಕ 'ಪದ್ಮಾವತಿ'ಯನ್ನು ಬೆಂಬಲಿಸಲಿದ್ದಾರೆ. ಇಂದು ಸಂಜೆ 4.15ರಿಂದ 4.30ರ ವರೆಗೆ ದೇಶಾದ್ಯಂತ ಚಿತ್ರೀಕರಣವನ್ನು ಬಂದ್ ಮಾಡಲಾಗುತ್ತಿದೆ. ಈ ಪ್ರತಿಭಟನೆ ಮೂಲಕ ನಾವು ಸ್ವತಂತ್ರರೇ? ನಾವು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆಯೇ? ಎಂದು ಪ್ರಶ್ಮಿಸಲಾಗುವುದು ಎಂದು ಐಎಫ್ ಟಿಡಿಎ ಸಂಚಾಲಕ ಅಶೋಕ್ ಪಂಡಿತ್ ಅವರು ಹೇಳಿದ್ದಾರೆ. ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಮತ್ತು ರಾಣಿ ಪದ್ಮಾವತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಜಪೂತ್ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಚಿತ್ರ ಬಿಡುಗಡೆಗೂ ಮುನ್ನ ಹಲವು ರಾಜ್ಯಗಳಲ್ಲಿ ನಿಷೇಧ ಹೇರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries