HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸೌರ ಮಂಡಲದ ಹೊಸ ಅತಿಥಿ ಒಮುಮಾಮುವಾ! ನಾಸಾ ವಿಜ್ಞಾನಿಗಳಿಂದ ಪತ್ತೆ ವಾಷಿಂಗ್ಟನ್: ಸೌರ ಮಂಡಲಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅದೊಂದು ಕ್ಷುದ್ರಗ್ರಹವಾಗಿದ್ದು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಜ್ಞಾನಿಗಳು 'ಕ್ಷುದ್ರಗ್ರಹ 1/2017 ಗ1 ಅಥವಾ ಒಮುಮಾಮುವಾ ಎಂದು ಹೆಸರಿಸಿದ್ದಾರೆ. ಹವಾಯಿ ಭಾಷೆಯಲ್ಲಿ 'ಒಮುಮಾಮುವಾ' ಎಂದರೆ 'ಬಹಳ ದೂರದಿಂದ ಬಂದ ಪ್ರಥಮ ಸಂದೇಶ' ಎಂದು ಅರ್ಥವಿದೆ. ವಿಜ್ಞಾನಿಗಳು ಹೇಳುವಂತೆ ನಮ್ಮ ಸೌರ ಮಂಡಲದೊಳಕ್ಕೆ ಬೇರೆ ಸೌರ ಮಂಡಲದಿಂದ ಬಂದ ಮೊದಲ ಕ್ಷುದ್ರಗ್ರಹ ಇದು. ಈ ಕಾರಣಕ್ಕೆ ವಿಜ್ಞಾನಿಗಳು ಇದರ ಕುರಿತಂತೆ ಸಾಕಷ್ಟು ಕುತೂಹಲ ಬೆಳೆಸಿಕೊಂಡಿದ್ದಾರೆ. ವೈಜ್ಞಾನಿಕವಾಗಿ ಇದೊಂದು ಮಹತ್ವದ ಸಂಶೋಧನೆ ಎಂದಿರುವ ನಾಸಾ ಮತ್ತೊಂದು ಸೌರಮಂಡಲದಿಂದ ಪ್ರತ್ಯೇಕವಾಗಿ ಸಾವಿರಾರು ವರ್ಷಗಳ ಕಾಲ ಕ್ರಮಿಸಿ ಬಂದಿರುವ ಈ ಕ್ಷುದ್ರಗ್ರಹ 400 ಮೀಟರ್ ಉದ್ದ, 40 ಮೀಟರ್ ಅಗಲವಾಗಿದೆ. ವಿಚಿತ್ರ ಆಕಾರದಿಂದ ಕೂಡಿರುವ ಇದನ್ನು ಅ.19 ರಂದು ಹವಾಯಿಯಲ್ಲಿನ ದೂರದರ್ಶಕದ ಮೂಲಕ ಗುರುತಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries