ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಭವಿಷ್ಯದಲ್ಲಿ ಜಿಎಸ್ ಟಿ ಇಳಿಕೆಯಾಗಿ ಏಕರೂಪ ತೆರಿಗೆ ಜಾರಿ ಬರುವ ಸಾಧ್ಯತೆ: ಅರವಿಂದ ಸುಬ್ರಹ್ಮಣ್ಯನ್
ಹೈದರಾಬಾದ್: ಮುಂದಿನ ದಿನಗಳಲ್ಲಿ ಕೆಲವು ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಶೇಕಡಾ 18 ಮತ್ತು 12ರಿಂದ ಇನ್ನಷ್ಟು ಇಳಿಕೆಯಾಗಿ ಏಕರೂಪ ತೆರಿಗೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಮುಖ್ಯ ಆಥರ್ಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಹೇಳಿದ್ದಾರೆ.
ಕಳೆದ ಜುಲೈ 1ರಂದು ಜಾರಿಗೆ ಬಂದ ಕೇಂದ್ರ ಸಕರ್ಾರದ ಹೊಸ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ ಮುಂದಿನ ಆರರಿಂದ 9 ತಿಂಗಳು ಇರಲಿದ್ದು ಬೇರೆ ದೇಶಗಳಿಗೆ ಇದು ಮಾದರಿಯಾಗಲಿದೆ. ಮುಂದಿನ ಆರು ತಿಂಗಳಲ್ಲಿ ವ್ಯವಸ್ಥೆಯೆಲ್ಲವೂ ಸರಿಹೋಗಿ ಸ್ಥಿರತೆಯುಂಟಾಗಲಿದೆ. ಇದು ಬೇರೆ ದೇಶಗಳಿಗೂ ಅನುಕರಣೆಯಾಗಲಿದೆ. ನಂತರ ಶೇಕಡಾ 12 ಮತ್ತು ಶೇಕಡಾ 18 ಎಂಬ ತೆರಿಗೆ ದರ ಇಳಿಕೆಯಾಗಿ ಒಂದೇ ತೆರಿಗೆ ದರ ಬರಲಿದೆ.


