ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಮೀಯಪದವು ಅಯ್ಯಪ್ಪ ದೀಪೋತ್ಸವ ಸಮಿತಿ ರೂಪೀಕರಣ
ಮಂಜೇಶ್ವರ : ಶ್ರೀ ಅಯ್ಯಪ್ಪ ಭಜನಾ ಮಂದಿರ ಮೀಯಪದವು ಇದರ ಆಶ್ರಯದಲ್ಲಿ ವಾಷರ್ಿಕ ಅಯ್ಯಪ್ಪ ದೀಪೋತ್ಸವವು ಡಿಸೆಂಬರ್ 26 ರಂದು ಮಂಗಳವಾರ ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು ಆ ಬಗ್ಗೆ ಉತ್ಸವ ಸಮಿತಿಯನ್ನು ರೂಪೀಕರಣ ಪೂರ್ವತಯಾರಿ ಸಭೆ ಇತ್ತೀಚೆಗೆ ಭಜನಾಮಂದಿರದಲ್ಲಿ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಪಳ್ಳತ್ತಡ್ಕ ಚಂದ್ರಶೇಖರ ಶೆಟ್ಟಿಯವರ ಅಧ್ಯಕ್ಷತೆ ಯಲ್ಲಿ ಜರಗಿತು.
ಸಭೆಯಲ್ಲಿ ಉತ್ಸವಸಮಿತಿ ಅಧ್ಯಕ್ಷರಾಗಿ ದಿವಾಕರ ರೈ ಮುನ್ನಿಪ್ಪಾಡಿ ಯವರನ್ನು ಆರಿಸಲಾಯಿತು. ಕಾರ್ಯದಶರ್ಿಯಾಗಿ ಹರೀಶ ಮೀಯಪದವು, ಕೋಶಾಧಿಕಾರಿಯಾಗಿ ಜನಾರ್ಧನ ಟೈಲರ್ ಮೀಯಪದವು, ಮತ್ತು ವಿವಿಧ ಉಪಸಮಿತಿಯ ಸಂಚಾಲಕರನ್ನು ಆರಿಸಲಾಯಿತು.
ರಾಜಾರಾಮ ರಾವ್ ಮೀಯಪದವು ಸ್ವಾಗತಿಸಿ, ಪುಷ್ಪರಾಜ ಶೆಟ್ಟಿ ತಲೇಕಳ ವಂದಿಸಿದರು. ರಂಜಿತ್ ಗುರುಸ್ವಾಮಿ, ಹಾಗೂ ಸೇವಾಸಮಿತಿ ಕಾರ್ಯದಶರ್ಿ ಸದಾನಂದ ರೈ ಕಳ್ಳಿಗೆ, ಸೇವಾಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

