ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಅನಂತಪುರ ಕ್ಷೇತ್ರದಲ್ಲಿ ಭಾಗವತ ಸಪ್ತಾಹ
ಕುಂಬಳೆ: ಸರೋವರ ಕ್ಷೇತ್ರವೆಂದೇ ಪ್ರಸಿದ್ಧವಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ಕ್ಷೇತ್ರದ ಅನಂತಶ್ರೀ ಸಭಾಂಗಣದಲ್ಲಿ ಭಾಗವತ ಸಪ್ತಾಹ ಸಮಿತಿಯ ಆಶ್ರಯದಲ್ಲಿ ನವೆಂಬರ್ 30 ರಿಂದ ಡಿ. 7ರ ತನಕ ಕ್ಷೇತ್ರಾಚಾರ್ಯರಾಗಿರುವ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ಶ್ರೀಮದ್ಭಾಗವತ ಸಪ್ತಾಹ ಕಾರ್ಯಕ್ರಮ ಜರಗಲಿದೆ. ಯಜ್ಞಾಚಾರ್ಯರಾದ ಬ್ರಹ್ಮಶ್ರೀ ಪೆರಿಗಮನ ಶ್ರೀಧರನ್ ನಂಬೂದಿರಿ ಮತ್ತು ಬ್ಹಹ್ಮಶ್ರೀ ವೇದಮೂತರ್ಿ ಕೇಕಣಾಜೆ ಕೇಶವ ಭಟ್ ಅವರಿಂದ ಪಾರಾಯಣ ಮತ್ತು ಪ್ರವಚನದೊಂದಿಗೆ ಜರಗಲಿದೆ. ಕಾರ್ಯಕ್ರಮದ ಪೂರ್ಣ ಯಶಸ್ಸಿಗಾಗಿ ಆಸ್ತಿಕ ಬಾಂಧವರ ಸಂಪೂರ್ಣ ಸಹಕರಿಸಿ ಯಶಸ್ವಿಗೊಳಿಸಬೇಕೆಂದು ಸಮಿತಿ ಅಧ್ಯಕ್ಷ ಶಂಕರ್ ಪ್ರಸಾದ್ ಮತ್ತು ಕಾರ್ಯದಶರ್ಿ ಸುನಿಲ್ ಕುಮಾರ್ ವಿನಂತಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ನ.30 ರಂದು ಸಂಜೆ 5ಕ್ಕೆ ಆಚಾರ್ಯರಿಗೆ ಸ್ವಾಗತ, 5.30ಕ್ಕೆ ಭಾಗವತ ಯಜ್ಞಾರಂಭ ಸಮಾರಂಭ, 6ಕ್ಕೆ ಕ್ಷೇತ್ರ ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರಿಂದ ಭದ್ರದೀಪ ಪ್ರಜ್ವಲನ, 7 ರಿಂದ ಮದ್ಬಾಗವತ ಮಹಾತ್ಮ್ಯೆ ಪಾರಾಯಣ ಹಾಗೂ ಉಪನ್ಯಾಸ ನಡೆಯಲಿದೆ.
ಡಿ.1 ರಂದು ಬೆಳಿಗ್ಗೆ 6ಕ್ಕೆ ಸಾಮೂಹಿಕಾರ್ಚನೆ ಮತ್ತು ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ, ಬಳಿಕ ಸೂತ-ಶೌನಕ ಸಂವಾದ, ವ್ಯಾಸ ನಾರದ ಸಂವಾದ, ಕುಂತೀ ಸ್ತುತಿ, ಭೀಷ್ಮಸ್ತುತಿ, ಪರೀಕ್ಷಿತನ ಚರಿತ್ರೆ, ವಿದುರ ಮೈತ್ರೇಯ ಸಂವಾದ ವರಾಹಾವತಾರ ಪ್ರವಚನ ನಡೆಯಲಿದೆ.
ಡಿ.2 ರಂದು ಬೆಳಿಗ್ಗೆ 6ಕ್ಕೆ ಸಾಮೂಹಿಕಾರ್ಚನೆ ಮತ್ತು ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ, ಬಳಿಕ ಕಪಿಲಾವತಾರ, ಕಪಿಲೋಪದೇಶ, ದಕ್ಷಯಾಗ, ಧ್ರುವ ಚರಿತ್ರೆ, ಪೃಥು ಚರಿತ್ರೆ, ಪುರಂಜನೋಪಖ್ಯಾನ, ಋಜಭಾವತಾರ, ಭರತಚರಿತ್ರೆ, ಭದ್ರಕಾಳಿ ಆವಿಭರ್ಾವ ವಾಚನ ಪ್ರವಚನ ನಡೆಯಲಿದೆ.
ಡಿ.3 ರಂದು ಬೆಳಿಗ್ಗೆ 6 ಕ್ಕೆ ಸಾಮೂಹಿಕಾರ್ಚನೆ ಮತ್ತು ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ, ಬಳಿಕ ಭೂಲೀಕ ವರ್ಣನೆ, ಜ್ಯೋತಿಗರ್ೋಳ ವರ್ಣನೆ, ಅಜಾಮಿಳೋಪಖ್ಯಾನ, ವೃತ್ರಾಸುರ ಚರಿತ್ರೆ, ನರಸಿಂಹಾವತಾರ, ಪ್ರಹ್ಲಾದ ಚರಿತ್ರೆಗಳ ವಾಚನ ಪ್ರವಚನ ನಡೆಯಲಿದೆ.
ಡಿ.ರಂದು ಬೆಳಿಗ್ಗೆ 6ಕ್ಕೆ ಸಾಮೂಹಿಕಾರ್ಚನೆ ಮತ್ತು ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ, ಬಳಿಕ ವಣರ್ಾಶ್ರಮ ಧರ್ಮಗಳು, ಗಜೇಂದ್ರ ಮೋಕ್ಷ, ಕ್ಷೀರ ಸಾಗರ ಮಥನ, ಶಂಕರಮೋಹನ, ವಾಮನಾವತಾರ, ಮತ್ಸ್ಯಾವತಾರ, ಅಂಬರೀಶ ಚರಿತ್ರೆ, ಶ್ರೀರಾಮಾವತಾರ, ಶ್ರೀಕೃಷ್ಣಾವತಾರ ವಾಚನ ಪ್ರವಚನ ನಡೆಯಲಿದೆ.
ಡಿ. 5 ರಂದು ಬೆಳಿಗ್ಗೆ 6ಕ್ಕೆ ಸಾಮೂಹಿಕಾರ್ಚನೆ ಮತ್ತು ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ, ಬಳಿಕ ಪೂತನೀಮೋಕ್ಷ, ಬಾಲಲೀಲೆ, ಕಾಳೀಯ ಮರ್ಧನ, ಗೋವರ್ಧನೋದ್ದರಣ, ಗೋವಿಂದಾಭಿಷೇಕ, ರಾಸನೃತ್ಯ, ಅಕ್ರೂರ ಗೋಕುಲಾಗಮನ, ಕಂಸವಧೆ, ಉದ್ದವ ದೌತ್ಯ, ರುಕ್ಮಿಣೀ ಸ್ವಯಂವರದ ಭಾಗಗಳ ವಾಚನ ಪ್ರವಚನ ನಡೆಯಲಿದೆ.
ಡಿ.6 ರಂದು ಬೆಳಿಗ್ಗೆ 6ಕ್ಕೆ ಸಾಮೂಹಿಕಾರ್ಚನೆ ಮತ್ತು ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ, 7ಕ್ಕೆ ವಿದ್ಯಾಗೋಪಾಲ ಮಂತ್ರಾರ್ಚನೆ, ಬಳಿಕ ಸ್ಯಮಂತಕೋಪಖ್ಯಾನ, ರುಕ್ಮಿಣೀ ಶ್ರೀಕೃಷ್ಣ ಪ್ರಣಯ ಕಲಹ, ಬಾಣಾಸುರ ವಧೆ, ನಾರದ ಪರೀಕ್ಷೆ, ರಾಜಸೂಯ, ಕುಚೇಲ ವೃತ್ತಾಂತ, ವೃಷ್ಣಿಗೋಪ ಸಂಗಮ, ವೇದಸ್ತುತಿ, ಸಂತಾನಗೋಪಾಲ, ಉದ್ದವೋಪದೇಶ, ಹಂಸಾವತಾರ ವಾಚನ ಪ್ರವಚನ ನಡೆಯಲಿದೆ.
ಡಿ.7 ರಂದು ಗುರುವಾರ ಬೆಳಿಗ್ಗೆ 6ಕ್ಕೆ ಸಾಮೂಹಿಕಾರ್ಚನೆ ಮತ್ತು ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ, ಬಳಿಕ ಉದ್ದವೋಪದೇಶ, ಭಿಕ್ಷುಗೀತೆ, ಉದ್ದವರ ಬದರೀಯಾತ್ರೆ, ಭಗವಂತನ ಸ್ವಧಾಮಗಮನ, ಬ್ರಹ್ಮೋಪದೇಶ, ಪರೀಕ್ಷಿತನ ಮುಕ್ತಿ, ಮಾಕರ್ಾಂಡೇಯ ಚರಿತ್ರೆ, ಭಾಗವತ ಸಮರ್ಪಣೆ ನಡೆಯಲಿದೆ.ಮಧ್ಯಾಹ್ನ 12 ಕ್ಕೆ ಕಲಶಾಭಿಷೇಕ, ದೀಪಾರಾಧನೆನೊಂದಿಗೆ ಸಪ್ತಾಹ ಸಮಾರೋಪಗೊಳ್ಳಲಿದೆ.

