ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ರಂಗಸಿರಿ ಸಭೆ
ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಕಳೆದ ಏಳು ವರ್ಷಗಳಿಂದ ಶಾಸ್ತ್ರೀಯ, ಸುಗಮ ಸಂಗೀತ ಹಾಗೂ ಯಕ್ಷಗಾನ(ನಾಟ್ಯ, ಹಿಮ್ಮೇಳ) ತರಗತಿ ನಡೆಸುತ್ತಾ ಬಂದಿದ್ದು, ಸಾಂಸ್ಕೃತಿಕ ಲೋಕಕ್ಕೆ ಯಕ್ಷಗಾನ ಹಾಗೂ ಸಂಗೀತದ ಹಲವು ಪ್ರತಿಭೆಗಳನ್ನು ನೀಡುವ ಮೂಲಕ ತನ್ನದೇ ಗುರುತನ್ನು ಮೂಡಿಸಿದೆ. ಕನರ್ಾಟಕ, ಕೇರಳ, ತಮಿಳುನಾಡುಗಳಲ್ಲಿ ತನ್ನ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದೆ. ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ "ರಂಗಸಿರಿ ಸಂಭ್ರಮ 2018" ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಚಿಸಿದ್ದು, ಈ ಕಾರ್ಯಕ್ರಮದ ರೂಪುರೇಷೆಗಾಗಿ ನ. 27 ರಂದು ಸೋಮವಾರ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸಭೆಯನ್ನು ಕರೆಯಲಾಗಿದೆ. ಸಭೆಯು ಬದಿಯಡ್ಕದ ನವಜೀವನ ವಿದ್ಯಾಲಯದಲ್ಲಿ (ಮೂಕಾಂಬಿಕಾ ಸವರ್ಿಸ್ ಸ್ಟೇಶನ್ ಎದುರು) ಸಂಜೆ 4.15ಕ್ಕೆ ನಡೆಯಲಿದೆ. ರಂಗಸಿರಿ ಸಮಿತಿಯ ಎಲ್ಲಾ ಸದಸ್ಯರು, ವಿದ್ಯಾಥರ್ಿಗಳ ಹೆತ್ತವರು, ರಂಗಸಿರಿಯ ಹಿತೈಗಳು, ಕಲಾಪ್ರೋತ್ಸಾಹಕರು ಭಾಗವಹಿಸಬೇಕೆಂದು ಅಧ್ಯಕ್ಷರು ಪ್ರಟಣೆಯಲ್ಲಿ ತಿಳಿಸಿದ್ದಾರೆ.

