ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಕುಮಾರಮಂಗಲ ಕ್ಷೇತ್ರದಲ್ಲಿ ಷಷ್ಠೀ ಮಹೋತ್ಸವ ಸಂಪನ್ನ
ಬದಿಯಡ್ಕ: ನೀಚರ್ಾಲು ಸಮೀಪದ ಬೇಳ ಕುಮಾರಮಂಗಲ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠೀ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಗುರುವಾರ ಸಂಜೆ 4ಕ್ಕೆ ನೀಚರ್ಾಲು ಅಶ್ವತ್ಥಕಟ್ಟೆ ಪರಿಸರ ಹಾಗೂ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರ ಪರಿಸರದಿಂದ ಏಕಕಕಾಲಕ್ಕೆ ಹೊರೆಕಾಣಿಕೆ ಮೆರವಣಿಗೆ ಹೊರಟು ಶ್ರೀಕ್ಷೇತ್ರಕ್ಕೆ ಆಗಮಿಸಿತು.
ಶುಕ್ರವಾರ ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, ವೇದಪಾರಾಯಣ, 7ಕ್ಕೆ ನವಕಾಭೀಷೇಕ, 11ಕ್ಕೆ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆಗಳು ನಡೆಯಿತು. ಸಂಜೆ 6ಕ್ಕೆ ದೀಪಾರಾಧನೆ, ತಾಯಂಬಕಂ, 7ಕ್ಕೆ ಏಣಿಯಪರ್ು ತರವಾಡಿನಿಂದ ಶ್ರೀವಿಷ್ಣುಮೂತರ್ಿ ದೈವದ ಭಂಡಾರ ಆಗಮನ, ಹುಲ್ಪೆ ಮೆರವಣಿಗೆ ನಡೆಯಿತು. 7 ಕ್ಕೆ ರಂಗಪೂಜೆ, ಉತ್ಸವ ಬಲಿ, ಬೇಳದ ಅಸ್ವತ್ಥ ಕಟ್ಟೆಗೆ ಶ್ರೀದೇವರ ಘೋಷಯಾತ್ರೆ, ಪೂಜೆ, ಬೆಡಿಕಟ್ಟೆಯಲ್ಲಿ ಬೆಡಿಸೇವೆ, 12 ಕ್ಕೆ ರಾಜಾಂಗಣ ಪ್ರಸಾದ ವಿತರಣೆ ಮತ್ತು ಮಂಗಳ ಶಯನೋತ್ಸವ ನಡೆಯಿತು.
ಶನಿವಾರ ಬೆಳಿಗ್ಗೆ 8.30ಕ್ಕೆ ಶ್ರೀವಿಷ್ಣುಮೂತರ್ಿ ದೈವದ ಕೋಲ,ಪ್ರಸಾದ ವಿತರಣೆ, ಏಣಿಯಪರ್ು ತರವಾಡಿಗೆ ವಿಷ್ಣುಮೂತರ್ಿ ದೈವದ ಭಂಡಾರ ನಿರ್ಗಮನದೊಂದಿಗೆ ಉತ್ಸವ ಸಂಪನ್ನಗೊಂಡಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


