ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಬಡಗು ಶಬರಿಮಲೆಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಸಹಾಯಧನ ಹಸ್ತಾಂತರ
ಬದಿಯಡ್ಕ : ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀಶಾಸ್ತಾರ ದೇವಸ್ಥಾನದ ಜೀಣರ್ೋದ್ಧಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧಮರ್ಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆಯವರು ನೀಡಿರುವ ಸಹಾಯಧನದ ಚೆಕ್ನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
ಬಡಗು ಶಬರಿಮಲೆ ಉಬ್ರಂಗಳ ಶ್ರೀಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೇತನಾ ಅವರು ಸಹಾಯಧನ ರೂ.5,00,000ದ ಚೆಕ್ನ್ನು ಕ್ಷೇತ್ರದ ಕಿರಣ್ ಕುಣಿಕ್ಕುಳಾಯ, ಜಯರಾಜ್ ಕುಣಿಕ್ಕುಳ್ಳಾಯ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಜೀಣರ್ೋದ್ಧಾರ ಸಮಿತಿಯ ಪ್ರಧಾನ ಕಾರ್ಯದಶರ್ಿ ಬಾಬು ಮಾಸ್ತರ್, ಇಂದಿರ ಕುಣಿಕ್ಕುಳಾಯ, ಮನುಪಣಿಕ್ಕರ್, ಕೃಷ್ಣಮಣಿಯಾಣಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಪನಡ್ಕ ಒಕ್ಕೂಟದ ಅಧ್ಯಕ್ಷೆ ಶಶಿಕಲಾ, ಕಾರ್ಯದಶರ್ಿ ಸರಸ್ವತಿ, ಸೇವಾಪ್ರತಿನಿಧಿ ಕಮಲಾಕ್ಷಿ, ಗಾಯತ್ರಿ, ಶ್ರೀ ಶಾಸ್ತಾ ಸಂಘದ ಲೀಲಾವತಿ, ದೇವಕಿ ಹಾಗೂ ಶ್ರೀ ಕ್ಷೇತ್ರದ ಜೀಣರ್ೋದ್ಧಾರ ಸಮಿತಿಯ ಯುವ ಸಮಿತಿ, ಮಹಿಳಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


