ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಮಂಜೇಶ್ವರ ಉಪ ನೋಂದಣಿ ಕಚೇರಿಗೆ ಶಿಲಾನ್ಯಾಸ
ಮಂಜೇಶ್ವರ: ಹೊಸ ಕಾಲಘಟ್ಟದಲ್ಲಿ, ಜನಪರ ಸೇವೆ ನೀಡಲು ಸರಕಾರ ಅಗತ್ಯ ಕ್ರಮಕೈಗೊಂಡಿದೆ. ಆಧುನಿಕ ಇ-ಪೇಮೆಂಟ್, ಇ-ಸ್ಟ್ಯಾಂಪಿಂಗ್ ಸೇವೆಗಳ ಮೂಲಕ ಭೂದಾಖಲಾತಿ ಕಾರ್ಯಗಳು ಸುಲಲಿತವಾಗಲಿವೆ ಎಂದು ಲೊಕೋಪಯೋಗಿ ಸಚಿವ ಜಿ.ಸುಧಾಕರನ್ ಹೇಳಿದರು.
ಮಂಜೇಶ್ವರ ಉಪ ನೋಂದಣಿ ಕಚೇರಿ ಕಟ್ಟಡದ ಶಿಲಾಫಲಕವನ್ನು ಶುಕ್ರವಾರ ಅನಾವರಣಗೊಳಿಸುವ ಮೂಲಕ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಹೊಸತಾಗಿ ನಿಮರ್ಾಣಗೊಳ್ಳಲಿರುವ ಮಂಜೇಶ್ವರ ಉಪ ನೋಂದಣಿ ಕಚೇರಿ ಕಟ್ಟಡವು ಜನಸಾಮಾನ್ಯರ ಬಹು ಕಾಲದ ಬೇಡಿಕೆಯಾಗಿದ್ದು, ಕಟ್ಟಡ ನಿಮರ್ಾಣದ ಮೂಲಕ ಬೇಡಿಕೆ ಪೂರ್ಣಗೊಳ್ಳಲಿದೆ ಎಂದರು. ಆಧುನೀಕರಣಗೊಂಡಿರುವ ರಾಜ್ಯದ ಎಲ್ಲ ನೋಂದಣಿ ಕಚೇರಿಗಳು ಗೊಂದಲ ರಹಿತವಾಗಿ ವೇಗ ಹಾಗೂ ದಕ್ಷತೆಯ ಮೂಲಕ ಕರ್ತವ್ಯ ನಿರ್ವಹಿಸಲಿವೆ. ಸಕಲ ಸೌಲಭ್ಯಗಳನ್ನೊಳಗೊಂಡ ಸುವ್ಯವಸ್ಥಿತ ಮಂಜೇಶ್ವರ ಉಪ ನೊಂದಣಿ ಕಚೇರಿಯ ನಿಮರ್ಾಣವು ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಉತ್ತಮ ಸೇವೆಯನ್ನು ನೀಡಲಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ದಾಖಲಾತಿ ನಡೆಸುವ ರಾಜ್ಯದ ಏಕೈಕ ನೋಂದಣಿ ಕಚೇರಿ ಮಂಜೇಶ್ವರವಾಗಿದ್ದು, ಶತಮಾನದ ಇತಿಹಾಸವನ್ನು ಹೊಂದಿದೆ ಎಂದರು. ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ರಾಜ್ಯ ಸರಕಾರ ವಿವಿಧ ಜನಪರ ಯೋಜನೆಗಳನ್ನು ಸಾಕಾರಗೊಳಿಸಿದೆ. ಆಧುನೀಕರಣ ಹಾಗೂ ಮೂಲ ಸೌಕರ್ಯಗಳನ್ನು ಕೊಡಮಾಡುವಲ್ಲಿ ಸರಕಾರ ಮುಂದಡಿ ಇರಿಸಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ಬಿಅಬ್ದುಲ್ರಜಾಕ್ 1884 ರಲ್ಲಿಆರಂಭಗೊಂಡ ಸಬ್ರಿಜಿಸ್ಟ್ರಾರ್ಕಚೇರಿಯು ಹಳೆ ಕಟ್ಟಡದಲ್ಲಿಕಾಯರ್ಾಚರಿಸುತ್ತಿದೆ. ಕಾಸರಗೋಡು ಪ್ಯಾಕೇಜ್ ಮೂಲಕ ಸರಕಾರ ಹಾಗೂ ಶಾಸಕರ ನಿಧಿ ಮೂಲಕ ಒಟ್ಟು 70 ಲಕ್ಷರೂ. ವೆಚ್ಚದಲ್ಲಿ ನೂತನ ಕಟ್ಟಡವು ಶೀಘ್ರನಿಮರ್ಾಣಗೊಂಡು ಜನಪರ ಸೇವೆಯ ಲಕ್ಷ್ಯ ಸಾಕಾರಗೊಳಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಗ್ರಾ.ಪಂ ಅಧ್ಯಕ್ಷ ಅಬ್ದುಲ್ಅಜೀಜ್ ಹಾಜಿ, ಮಂಗಲ್ಪಾಡಿ ಗ್ರಾ.ಪಂ ಅಧ್ಯಕ್ಷ ಶಾಹುಲ್ ಹಮೀದ್, ಮೀಂಜ ಗ್ರಾ.ಪಂ ಅಧ್ಯಕ್ಷೆ ಶಂಶಾದ್ ಶುಕೂರ್, ಕಾಸರಗೋಡು ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಮೊದಲಾದವರು ಶುಭಾಶಂಸನೆಗೈದರು. ಸಹ ನೋಂದಣಾಧಿಕಾರಿ ಪಿ.ಕೆ ಸಜನ್ಕುಮಾರ್ ಸ್ವಾಗತಿಸಿ, ಲೊಕೋಪಯೋಗಿ ಇಲಾಖೆಯ ಕಾಸರಗೋಡು ವಿಭಾಗದ ಮುಖ್ಯ ಪ್ರಬಂಧಕ ಸಿ.ರಾಜೇಶ್ ಚಂದ್ರನ್ ವರದಿ ವಾಚಿಸಿದರು.ಎ.ಜಿ ವೇಣುಗೋಪಾಲ್ ವಂದಿಸಿದರು.
ಅತಿಥಿ ಗೃಹ ಮೇಲ್ದಜರ್ೆಗೆ ಮನವಿ, ಒಪ್ಪಿಗೆ!
ಮಂಜೇಶ್ವರ ಲೊಕೋಪಯೋಗಿ ಕಚೇರಿ ಕಟ್ಟಡ ಹಾಗೂ ಸರಕಾರಿ ಅತಿಥಿಗೃಹದ ನಿಮರ್ಾಣಕಾರ್ಯಕ್ಕೆ ಸಚಿವ ಜಿ.ಸುಧಾಕರನ್ ಅವರಲ್ಲಿ ಮಂಜೇಶ್ವರ ಬ್ಲಾ.ಪಂ ಸದಸ್ಯ ಕೆ.ಆರ್.ಜಯಾನಂದ ಮನವಿ ಸಲ್ಲಿಸಿದ್ದು, ಸಚಿವರು ಮೌಖಿಕ ಒಪ್ಪಿಗೆ ಸೂಚಿಸಿದ್ದಾರೆ. ಲೊಕೋಪಯೋಗಿ ಕಚೇರಿ ಕಟ್ಟಡಕ್ಕೆ 30 ಲಕ್ಷರೂ. ಹಾಗೂ ಸರಕಾರಿ ಅತಿಥಿ ಗೃಹಕ್ಕೆ 2.50 ಕೋಟಿರೂ. ನೀಡಲಾಗುವುದೆಂದು ಸಚಿವರು ತಿಳಿಸಿದ್ದಾರೆ.


