HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ರಸ್ತೆ ಲೋಕಾರ್ಪಣೆ ಉಪ್ಪಳ: ರಾಜ್ಯ ರಾಜಧಾನಿಯಿಂದ ಬಹು ದೂರವಿರುವ ಕಾಸರಗೋಡು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಕಟಿಬದ್ಧವಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿರುವ ಕಾರ್ಯಗಳನ್ನು ಸ್ಥಳೀಯಾಡಳಿತ ಸಂಸ್ಥೆ ಸಹಿತ ಜನಪ್ರತಿನಿಧಿಗಳು ಮಾಡಿದಲ್ಲಿಅಭಿವೃದ್ಧಿ ಕಾರ್ಯಗಳು ಚುರುಕಾಗಿ ನಡೆಯಲಿವೆ ಎಂದು ಕೇರಳ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಹೇಳಿದರು. ಉಪ್ಪಳ ಕೈಕಂಬದಲ್ಲಿ ಶುಕ್ರವಾರ ನಡೆದ ವಿದ್ಯಾನಗರ-ಸೀತಾಂಗೋಳಿ, ಉಪ್ಪಳ ಕೈಕಂಬ-ಕನ್ಯಾನರಸ್ತೆಯನ್ನು ಲೋಕಾರ್ಪಣೆಗೈದು ಅವರು ಮಾತನಾಡಿದರು. ಜಿಲ್ಲೆಯಅಭಿವೃದ್ಧಿ ಹೊಂದುತ್ತಿರುವ ಪೇಟೆಗಳಲ್ಲಿ ಉತ್ತಮ ರಸ್ತೆ ಜೊತೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕಿದೆ. ವಾಹನಗಳ ದಟ್ಟನೆಯ ನಿವಾರಣೆಗೆ ಪೂರಕವಾಗುವಂತೆ ಸ್ಥಳೀಯಾಡಳಿತ ಸಂಸ್ಥೆಗಳು ಸಹಕರಿಸಬೇಕೆಂದು ಅವರು ತಿಳಿಸಿದರು. ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಬಾಧಿಸದು, ನಬಾಡರ್್ ಸಹಯೋಗದೊಂದಿಗೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಜಿಲ್ಲೆಯ ಸರ್ವತೋಮುಖ ಏಳಿಗೆಗೆ ಸರಕಾರ ಕಂಕಣಬದ್ಧವಾಗಿದೆ. ಸರಕಾರ ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ಜಿಲ್ಲೆಯ ಹಲವು ಯೋಜನೆಗಳಿಗೆ 600 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.ಪ್ರಸ್ತುತ ಇಲಾಖೆ ಮೂಲಕ ನಿಮರ್ಾಣಗೊಂಡ ರಸ್ತೆಯು ಅಂತಾರಾಷ್ಟ್ರೀಯ ದಜರ್ೆರಸ್ತೆಯಾಗಿದ್ದು, 81 ಕೋಟಿರೂ.ವೆಚ್ಚದಲ್ಲಿ ನಿಮರ್ಿಸಲಾಗಿದೆ.13 ವರ್ಷಗಳ ಗ್ಯಾರಂಟಿ ಹೊಂದಿದ್ದು, ರಸ್ತೆ ಬದಿ ಸೋಲಾರ್ ದೀಪಗಳು, ನಾಮಫಲಕ, ಉತ್ತಮ ತಂಗುದಾಣಗಳನ್ನು ಹೊಂದಿದೆ ಎಂದರು.ಜಿಲ್ಲೆಯ ಹಿಂದುಳಿದ ಮಂಜೇಶ್ವರ ಸಹಿತ ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಸರಕಾರ ಲಕ್ಷ್ಯವಿರಿಸಿಕೊಂಡಿದ್ದು, ರಾಜಕೀಯ ಹಾಗೂ ವೈಯಕ್ತಿಕ ಅಭಿಲಾಷೆಗಳಿಂದ ಸಾರ್ವಜನಿಕ ಹಿತಾಸಕ್ತಿ ಬಾಧಿತವಾಗಬಾರದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರ ಶಾಸಕ ಪಿ.ಬಿಅಬ್ದುಲ್ರಜಾಕ್ ಮಾತನಾಡಿ, ಹಲವು ಬಾರಿಗುತ್ತಿಗೆ ನೀಡಲ್ಪಟ್ಟು ಮೊಟಕುಗೊಂಡ ರಸ್ತೆ ಯೋಜನೆ ಉಪ್ಪಳ-ಕನ್ಯಾನ ರಸ್ತೆ ದೃಢ ಸಂಕಲ್ಪದ ಮೂಲಕ ಹಲವು ವರ್ಷಗಳ ಕಾಲ ಗಗನಕುಸುಮದಂತಿದ್ದ ರಸ್ತೆ ಅಭಿವೃದ್ಧಿಯೋಜನೆ ಸಾಕಾರಗೊಂಡಿದೆ ಎಂದವರು ತಿಳಿಸಿದರು. ಕ್ಷೇತ್ರಕ್ಕೆ ಉತ್ತಮ ರಸ್ತೆ ಸೌಕರ್ಯ ಕೊಡಮಾಡಿದ ಪ್ರಸ್ತುತ ಸರಕಾರ ಹಾಗೂ ಹಿಂದಿನ ಸರಕಾರಗಳಿಗೆ ಧನ್ಯವಾದ ತಿಳಿಸಿದರು.ರಸ್ತೆ ಸೌಕರ್ಯದೊಂದಿಗೆ ಹಲವು ಅಭಿವೃದ್ಧಿಪರ ಯೋಜನೆಗಳ ಅವಶ್ಯಕತೆ ಮಂಜೇಶ್ವರ ಕ್ಷೇತ್ರಕ್ಕಿದೆ ಎಂದು ಅವರು ಹೇಳಿದರು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಉದುಮ ಶಾಸಕ ಕೆ.ಕುಞರಾಮನ್, ಮಂಗಲ್ಪಾಡಿ ಗ್ರಾ.ಪಂ ಅಧ್ಯಕ್ಷ ಶಾಹುಲ್ ಹಮೀದ್, ಮಂಜೇಶ್ವರ ಬ್ಲಾಕ್.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಕಾಸರಗೋಡು ನಗರಸಭಾ ಅಧ್ಯಕ್ಷೆ ಬಿ.ಫಾತಿಮಾ ಇಬ್ರಾಹಿಂ, ಕಾಸರಗೋಡು ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಮಂಜೇಶ್ವರ ಬ್ಲಾ.ಪಂ ಸದಸ್ಯ ಕೆ.ಆರ್.ಜಯಾನಂದ ಸಹಿತ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇರಳ ರಸ್ತೆ ಅಭಿವೃದ್ಧಿ ನಿಗಮದ ಎಂ.ಪೆಣ್ಣಮ್ಮ ಸ್ವಾಗತಿಸಿ, ಮುಖ್ಯ ನಿರ್ವಹಣಾಧಿಕಾರಿ ಜೇಕಬ್ಜೋಸೆಫ್ ವರದಿ ಮಂಡಿಸಿದರು. ಸಜಿತಾ ರೈ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries