ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ದೇಶೀಯ ಅಧ್ಯಾಪಕ ಮಪರಿಷತ್ತು ಉಪಜಿಲ್ಲಾ ವಿದ್ಯಾಭ್ಯಾಸ ದಿನ
ಕುಂಬಳೆ: ನಿತ್ಯ ವಿವಿಧ ಒತ್ತಡ, ಯಾಂತ್ರೀಕರಣದ ಜರೂರಿನ ಮಧ್ಯೆ ಜ್ಞಾನ ಸಾಗರವನ್ನು ಕಡೆದುಕೊಡುವ ಶಿಕ್ಷಕರ ಪಾತ್ರ ಮಹತ್ತರವಾದುದು. ಆಡಳಿತ ವರ್ಗದ ಮಜರ್ಿಯನ್ನು ಸಹಿಸಿ ಸಮಗ್ರ ರಾಷ್ಟ್ರೀಯತೆಯನ್ನು ದಾಟಿಸುವ ಶಿಕ್ಷಕರ ಸವಾಲುಗಳಿಗೆ ಧ್ವನಿಯಾಗಿ ಸಂಘಟನಾತ್ಮಕ ಕಾರ್ಯಯೋಜನೆಯ ಮೂಲಕ ತಮ್ಮದೇ ಹಕ್ಕು ಸಂರಕ್ಷಣೆಗೆ ಕಾರ್ಯವೆಸಗುವ ಶಿಕ್ಷಕ ಸಂಘದ ಚಟುವಟಿಕೆ ಸ್ತುತ್ಯರ್ಹ ಎಂದು ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು) ರಾಜ್ಯ ಉಪಾಧ್ಯಕ್ಷ ಅಶೋಕ್ ಬಾಡೂರು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶೀಯ ಅಧ್ಯಾಪಕ ಪರಿಷತ್ತಿನ ಮಂಜೇಶ್ವರ ಉಪಜಿಲ್ಲಾ ವಿದ್ಯಾಭ್ಯಾಸ ದಿನ ಹಾಗೂ ಉಪಜಿಲ್ಲಾ ಸಮ್ಮೇಳನವನ್ನು ಶನಿವಾರ ಎಸ್.ಡಿ.ಪಿ.ಎಚ್.ಎಸ್.ಎಸ್ ಶಾಲೆ ಧರ್ಮತ್ತಡ್ಕದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಸ್ತುತ ವರ್ಷ ಪಠ್ಯಪುಸ್ತಕಗಳ ಅಸಮರ್ಪಕ ವಿತರಣೆಯಿಂದ ವ್ಯಾಪಕ ಸಂದಿಗ್ದತೆಗಳು ಎದುರಾಗಿದ್ದು, ಎನ್.ಟಿ.ಯು ಸಂಘಟನೆಯ ಮೂಲಕ ಅಧಿಕೃತರೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಕಾಣುವ ಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಶಿಕ್ಷಕರ ಸಂವೇದನೆಗಳಿಗೆ ಸ್ಪಂಧಿಸುವ ರಾಷ್ಟ್ರದ ಏಕತೆ-ಸಮಗ್ರತೆಯೊಂದಿಗಿನ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಕಾಯರ್ಾಚರಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶೀಯ ಅಧ್ಯಾಪಕ ಪರಿಷತ್ತಿನ ಮಂಜೇಶ್ವರ ಉಪಜಿಲ್ಲಾಧ್ಯಕ್ಷ ಅರವಿಂದಾಕ್ಷ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ಕಿರಿಯ ಪ್ರಾಥಮಿಕ ಶಾಲಾ ಪ್ರಬಂಧಕಿ ಜಯಶ್ರೀ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಮಂಜೇಶ್ವರ ಉಪಜಿಲ್ಲಾ ಪ್ರ.ಕಾರ್ಯದಶರ್ಿ ಅಜಿತ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಸಿ.ರಘುವೀರ್ ವಂದಿಸಿದರು. ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.ಇದಕ್ಕೂ ಮೊದಲು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಅರವಿಂದಾಕ್ಷ ಭಂಡಾರಿ ಧ್ವಜಾರೋಹಣಗೈದು ಸಮಾರಂಭಕ್ಕೆ ಚಾಲನೆ ನೀಡಿದರು.
ಬಳಿಕ ಕಿರಿಯ,ಹಿರಿಯ ಪ್ರಾಥಮಿಕ, ಹೈಸ್ಕೂಲು ಮತ್ತು ಶಿಕ್ಷಕರ ವಿಭಾಗದಲ್ಲಿ ಭಗವದ್ಗೀತೆ ಪಾರಾಯಣ, ಕಥಾ ವಾಚನ, ಭಾವಚಿತ್ರ ರಚನೆ, ದೇಶಭಕ್ತಿಗೀತೆ, ಏಕಪಾತ್ರಾಭಿನಯ, ದೇಶಭಕ್ತಿಗೀತೆ, ರಸಪ್ರಶ್ನೆ ಸ್ಪಧರ್ೆಗಳು ವಿದ್ಯಾಥರ್ಿ ವಿಭಾಗದಲ್ಲೂ ರಸಪ್ರಶ್ನೆ ಮತ್ತು ಭಾವಗೀತೆಗಳ ಸ್ಪಧರ್ೆಗಳು ಶಿಕ್ಷಕರಿಗಾಗಿಯೂ ಏರ್ಪಡಿಸಲಾಗಿತ್ತು. ಬಳಿಕ ಸಮರೋಪ ಸಮಾರಂಭ ನಡೆಯಿತು. ಅಪರಾಹ್ನ ಉಪಜಿಲ್ಲಾ ಸಮ್ಮೇಳನ ಅರವಿಂದಾಕ್ಷ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಜಿತ್ ಕುಮಾರ್ ವರದಿ ವಾಚಿಸಿದರು. ರಘುವೀರ್ ಲೆಕ್ಕಪತ್ರ ಮಂಡಿಸಿದರು. ಎನ್ಟಿಯು ಪ್ರಾಂತ್ಯ ಸದಸ್ಯ ವೆಂಕಪ್ಪ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.



