HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕರಾವಳಿಯಾದ್ಯಂತ ಭರ್ಜರಿಯಾಗಿ ತೆರೆಕಂಡ ಶ್ರೀಮಂತಿಕೆಯ ತುಳುಚಿತ್ರ ಮಂಗಳೂರು-ಉಡುಪಿಗಳಲ್ಲಿ ಹೌಸ್ಫುಲ್ ಕಂಡ `ಅಂಬರ್ ಕ್ಯಾಟರಸರ್್' ಮಂಗಳೂರು: ಕರಾವಳಿ ಜನತೆಯ ನಿರೀಕ್ಷಿತ ಕಡಂದಲೆ ಸುರೇಶ್ ಎಸ್.ಭಂಡಾರಿ ನಿಮರ್ಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಿದ್ಧಗೊಂಡ ಹಾಸ್ಯ ರಸಪ್ರಧಾನ `ಅಂಬರ್ ಕ್ಯಾಟರಸರ್್' ತುಳು ಸಿನೆಮಾ ಶುಕ್ರವಾರ ಪೂವರ್ಾಹ್ನ ಮಂಗಳೂರುನ ಜ್ಯೋತಿ ಟಾಕೀಸ್ ಮತ್ತು ಉಡುಪಿ ಅಲ್ಲಿನ ಕಲ್ಪನಾ ಥಿಯೇಟರ್ ಸೇರಿದಂತೆ ಕರಾವಳಿಯಾದ್ಯಂತ ಭರ್ಜರಿಯಾಗಿ ತೆರೆಕಂಡಿತು. ಸ್ಥಾನೀಯ ರಿಕ್ಷಾ ಚಾಲಕರು ದೀಪ ಪ್ರಜ್ವಲಿಸಿ `ಅಂಬರ್ ಕ್ಯಾಟರಸರ್್' ತುಳು ಸಿನೆಮಾಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಅತಿಥಿಗಳಾಗಿ ಚಿತ್ರ ನಿಮರ್ಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಚಲನಚಿತ್ರ ನಿಮರ್ಾಪಕ ಪ್ರಕಾಶ್ ಪಾಂಡೇಶ್ವರ, ಕರಾಟೆಪಟು ವಸಂತ್ ಶೆಟ್ಟಿ, ಜ್ಯೋತಿ ಟಾಕೀಸ್ನ ಕೆ.ಪ್ರಶಾಂತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕೂಳೂರು ಮಾಧವ ಭಂಡಾರಿ, ಮೇಘಾ ಸೌರಭ್ ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿತ್ರವನ್ನು ವೀಕ್ಷಿಸಿ ಬಾರೀ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡವನ್ನು ಅಭಿನಂದಿಸಿ ಚಿತ್ರದ ಯಶಸ್ಸಿಗೆ ಶುಭಾರೈಸಿದರು. ಈ ಸಂದರ್ಭದಲ್ಲಿ ಚಿತ್ರ ನಿದರ್ೇಶಕ ಜಯಪ್ರಸಾದ್ ಬಜಾಲ್, ಅಭಿನೇತ ಕಾರ್ಕಳ ಶೇಖರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ನಟರಾಜ್ ಸುರತ್ಕಲ್, ಇನ್ಒಕ್ಸ್ ಮಣಿಪಾಲ್, ಅಮರಶ್ರೀ ಮೂಡಬಿದ್ರೆ, ರಾಧಿಕಾ ಮತ್ತು ಪ್ಲಾನೆಟ್ ಕಾರ್ಕಳ, ಅರುಣಾ ಪುತ್ತೂರು, ಭಾರತ್ ಬೆಳ್ತಂಗಡಿ, ಸಂತೋಷ್ ಸುಳ್ಯ, ಹಾಗೂ ಮಂಗಳೂರುನ ಪಿವಿಆರ್, ಬಿಗ್ ಸಿನೆಮಾಸ್, ಸಿನಿಪೊಲಿಸ್ ಇತ್ಯಾದಿ ಚಿತ್ರಮಂದಿರಗಳಲ್ಲೂ ಭರ್ಜರಿಯಾಗಿ ಪ್ರದಶರ್ಿಸಲ್ಪಟ್ಟು ಸಿನೆಮಾಪ್ರಿಯರ ಮನಾಕಷರ್ಿಸಿತು. ಚಿತ್ರದ ನಾಯಕನಟ ಸೌರಭ್ ಸುರೇಶ್ ಭಂಡಾರಿ ಸ್ವಾಗತಿಸಿದರು. ಕನರ್ೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬೃಹತ್ ಕಟೌಟ್: ಮಂಗಳೂರುನ ಜ್ಯೋತಿ ಟಾಕೀಸ್ನ ಮುಂಭಾಗದಲ್ಲಿ ಗಣೆೇಶ್ ಆಟರ್ಿಸ್ಟ್ ರಚಿತ ಕೇಶವ ಸುವರ್ಣ ನಿಮರ್ಿಸಿದ ನಾಯಕನಟ ಸೌರಭ್ ಸುರೇಶ್ ಭಂಡಾರಿ ಅವರ ಭಾರೀ ಗಾತ್ರದ 61'ಥ30' ಉದ್ದಗಲದ ಬೃಹತ್ ಕಟೌಟ್ ಅತ್ಯಾಕರ್ಷಕವಾಗಿ ಕಂಗೋಳಿಸುತ್ತಿದ್ದು, ಕರಾವಳಿಯಲ್ಲೇ ಇಷ್ಟೊಂದು ದೊಡ್ಡದಾದ ಕಟೌಟ್ ಇದೇ ಮೊದಲ ಬಾರಿ ಪ್ರದಶರ್ಿಸಲ್ಪಟ್ಟಿದೆ ಎಂದು ಚಿತ್ರಪ್ರಿಯರ ಅನಿಸಿಕೆಯಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries