ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 24, 2017
ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ನಿಧನ
ಮೈಸೂರು: ಹಿರಿಯ ಪತ್ರಕರ್ತ, ನಗರದ ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ (70) ಅವರು ಹೃದಯಾಘಾತದಿಂದ ಗುರುವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.
ಮೂಲತಃ ಧಾರವಾಡದ ರಾಜಶೇಖರ ಕೋಟಿ ಅವರು ಶಿಕ್ಷಣವನ್ನು ಅಲ್ಲಿಯೇ ಪೂರೈಸಿದ್ದರು. ನಾಡೋಜ ಪಾಟೀಲ ಪುಟ್ಟಪ್ಪನವರ ಪ್ರಪಂಚ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ್ದ ಅವರು, ಆಂದೋಲನ ವಾರಪತ್ರಿಕೆಯನ್ನು ಅಲ್ಲಿಯೇ ಆರಂಭಿಸಿದ್ದರು.
ನಂತರ ಮೈಸೂರಿಗೆ ಬಂದು ನೆಲಸಿ ಆಂದೋಲನವನ್ನು ದಿನಪತ್ರಿಕೆಯಾಗಿ ಪರಿವತರ್ಿಸಿದರು. ದಲಿತ, ರೈತ ಚಳವಳಿಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು, ಪ್ರಸ್ತುತ ಮಾಧ್ಯಮ ಅಕಾಡೆಮಿಯ ನಾಮನಿದರ್ೇಶನ ಸದಸ್ಯರಾಗಿದ್ದರು.
ಸಿಎಂ ಸಂತಾಪ:
ಹಿರಿಯ ಪತ್ರಕರ್ತ, ಆತ್ಮೀಯ ಗೆಳೆಯ ರಾಜಶೇಖರ ಕೋಟಿ ಅವರ ನಿಧನಕ್ಕೆ ಕನರ್ಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿರುವ ಸಿದ್ದರಾಮಯ್ಯ ಅವರು ಇಂದು ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ನೀಡಬೇಕಾಗಿರುವ ಕಾರಣ ಅಲ್ಲಿ ಸಿಎಂ ಉಪಸ್ಥಿತಿ ಅತ್ಯಗತ್ಯ. ಹೀಗಾಗಿ ಮೈಸೂರು ಭೇಟಿ ಬಗ್ಗೆ ಸದ್ಯದಲ್ಲೇ ತೀಮರ್ಾನಿಸಲಿದ್ದಾರೆ ಎಂದು ಮುಖ್ಯಮಂತ್ರಿ ಅವರ ಆಪ್ತವಲಯದ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಪತ್ರಿಕಾರಂಗ ಕಂಬನಿ ಮಿಡಿದಿದೆ. ಪಾಥರ್ಿವ ಶರೀರವನ್ನು ಮೈಸೂರಿಗೆ ತರಲಾಗಿದೆ.
ಅಂತಿಮ ದರ್ಶನ ಪಡೆದ ಗಣ್ಯರು:
ಮಾಜಿ ಸಚಿವ ಎಸ್.ಎ.ರಾಮದಾಸ್, ಮಾಜಿ ಸ್ಪೀಕರ್ ಕೆ.ಕೃಷ್ಣ, ಪ್ರೊ.ಕೆ.ಎಸ್.ರಂಗಪ್ಪ, ಕಾ.ಪು.ಸಿದ್ದಲಿಂಗಸ್ವಾಮಿ, ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ಮಾಜಿ ಮೇಯರ್ ಗಳಾದ ಪುರುಷೋತ್ತಮ್, ಬಿ.ಎಲ್ ಭೈರಪ್ಪ, ಆರ್.ಲಿಂಗಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್, ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಮಾಜಿ ಸಂಸದ ಹೆಚ್.ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಹೊಸ ಮಠದ ಶಿವಾನಂದ ಸ್ವಾಮೀಜಿ, ಪಾಲಿಕೆ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.
ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆಯು ಗುರುವಾರ ಸಂಜೆ 4 ಗಂಟೆಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ನಡೆಯಿತು.
ರಾಜಶೇಖರ ವಕೋಟಿಯವರು ಸಮರಸ ಸಂಪಾದಕ ಕಂಡಂತೆ:
ಕನ್ನಡ ಪತ್ರಿಕೋದ್ಯಮದಲ್ಲಿ ರಾಜಶೇಖರ್ ಕೋಟಿ ಅವರ ಹೆಸರು ಚಿರಪರಿಚಿತ. ಸುಮಾರು 45 ವರ್ಷಗಳಷ್ಟು ಸುದೀರ್ಘ ಕಾಲದಿಂದ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ದುಡಿದು ಜಿಲ್ಲಾ ಹಾಗೂ ಪ್ರಾದೇಶಿಕ ಮಟ್ಟದ ಪತ್ರಿಕೋದ್ಯಮಕ್ಕೆ ಅದ್ವಿತೀಯ ಕೊಡುಗೆ ನೀಡಿದವರು. ರಾಜ್ಯದಲ್ಲೇ ಅತ್ಯಂತ ಯಶಸ್ವಿ ದಿನಪತ್ರಿಕೆಯಾದ ಆಂದೋಲನವನ್ನು ಕಟ್ಟಿ ಬೆಳೆಸಿದ ಹಿರಿಮೆ ಅವರದು. ಯಾವುದೇ ರಾಜ್ಯಮಟ್ಟದ ಪತ್ರಿಕೆಗೆ ಸಾಟಿ ಎನ್ನುವ ರೀತಿಯಲ್ಲಿ ಅತ್ಯಾಧುನಿಕ ಮುದ್ರಣ ವ್ಯವಸ್ಥೆ, ಸುದ್ದಿಗಳ ವೈವಿಧ್ಯತೆ ಹಾಗೂ ವೈಶಿಷ್ಟ್ಯತೆಯೊಂದಿಗೆ ಆಂದೋಲನ ಪತ್ರಿಕೆಯನ್ನು ಹೊರ ತರುತ್ತಿದ್ದವರು. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಾಗೂ ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರಸಾರವಿರುವ ಆಂದೋಲನ ದಿನಪತ್ರಿಕೆಯ ಮೂಲಕ ಆ ಭಾಗದ ಜನರ ದನಿಯಾಗಿದ್ದರು.
ಜನರಲ್ಲಿ ಪತ್ರಿಕೆ ಓದುವ ಅಭಿರುಚಿ ಬೆಳೆಸುವ ಜೊತೆಗೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಆಗುಹೋಗುಗಳಿಗೆ ಆದ್ಯತೆ ಕೊಡುವ ಮೂಲಕ ನಾಡು ಕಟ್ಟುವ ಕೆಲಸವನ್ನು ಕೂಡ ಪತ್ರಿಕೋದ್ಯಮದ ಜೊತೆ ಜೊತೆಗೆ ಮಾಡುತ್ತಾ ಬಂದವರು. ಶೋಷಿತರು ಹಾಗೂ ದುಡಿಯುವ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಕೋಟಿ ಅವರು, ಆ ಜನರ ಏಳಿಗೆಗೆ ಕೊನೆಯವರೆಗೂ ಶ್ರಮಿಸಿದರು. ತಮ್ಮ ಪತ್ರಿಕೆಯಲ್ಲಿ ಓದುಗರ ಅಂಕಣವನ್ನು ಅತ್ಯಂತ ಜನಪ್ರಿಯ ಗೊಳಿಸಿದ ಹಿರಿಮೆ ಅವರದು. ಅದಲ್ಲದೆ, ಕನ್ನಡದ ಅಂಕಿಗಳನ್ನು ಬಳಸಿಯೂ ಪತ್ರಿಕೆಯ ಜನಪ್ರಿಯತೆ ಉಳಿಸಿಕೊಂಡಿರುವುದು ಅವರ ಹೆಗ್ಗಳಿಕೆಯಾಗಿದೆ. ತಮ್ಮ ಇದ್ದುದು ಇದ್ಹಾಂಗೆ ಅಂಕಣದ ಮೂಲಕ ನೇರ, ಸತ್ಯ, ನಿಷ್ಠುರ ಬರಹಗಳಿಗೆ ಹೆಸರಾಗಿದ್ದ ಕೋಟಿ ಅವರು ಬರವಣಿಗೆಯಂತೆಯೇ ಜನರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸುವಂತಹ ಭಾಷಣಗಳಲ್ಲೂ ಪ್ರಸಿದ್ಧರಾಗಿದ್ದರು. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಜನರಲ್ಲಿ ತಮ್ಮ ಬರವಣಿಗೆ ಭಾಷಣಗಳಿಂದ ಚಿರಪರಿಚಿತರಾಗಿದ್ದರು.
ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಕೋಟಿ ಅವರ ಕೊಡುಗೆ ಅಪಾರವಾದುದು. ಪ್ರಖ್ಯಾತ ಪತ್ರಿಕೋದ್ಯಮ ಪಾಟೀಲ ಪುಟ್ಟಪ್ಪನವರ ಪ್ರಪಂಚ ಹಾಗೂ ವಿಶ್ವವಾಣಿ ಪತ್ರಿಕೆಗಳಲ್ಲಿ ಓದುತ್ತಿರುವಾಗಲೇ ಕಾರ್ಯನಿರ್ವಹಿಸಿ ಅವರ ಗರಡಿಯಲ್ಲಿ ತಯಾರಾಗಿದ್ದ ಕೋಟಿ ಅವರು, ಅಪಾರ ಶಿಷ್ಯ ಕೋಟಿಯನ್ನು ಹೊಂದಿದ್ದು, ಅವರನ್ನೆಲ್ಲ ಅಗಲಿದ್ದಾರೆ. ತಮ್ಮ ಪತ್ರಿಕೆಗಳ ಹಾಗೆಯೇ ಎಲ್ಲಾ ಜಿಲ್ಲೆಗಳಲ್ಲೂ ಒಳ್ಳೆಯ ಪತ್ರಿಕೆಗಳು ಅಭಿವೃದ್ಧಿ ಹೊಂದಲೇಬೇಕೆಂಬ ಕಾಳಜಿ ಅವರದು. ಈ ಉದ್ದೇಶದಿಂದಲೇ ಕನರ್ಾಟಕ ಮಾಧ್ಯಮ ಅಕಾಡೆಮಿಯಲ್ಲಿ ಒಂದು ಲಕ್ಷ ರೂ. ಠೇವಣಿ ಇಟ್ಟು ಪ್ರತಿವರ್ಷ ಜಿಲ್ಲಾಮಟ್ಟದ ಅತ್ಯುತ್ತಮ ಪತ್ರಿಕೆಗೆ ಪುರಸ್ಕಾರ ನೀಡುವ ಪರಿಪಾಠ ಆರಂಭಿಸಿದ ಮೊದಲಿಗರಾಗಿದ್ದಾರೆ. ನೈಸಗರ್ಿಕ ವಿಕೋಪಗಳು ಸಂಭವಿಸಿದಾಗ, ಅಪಘಾತಗಳು ಸಂಭವಿಸಿದಾಗ ಪತ್ರಿಕೆ ಓದುಗರಿಂದ ನಿಧಿ ಸಂಗ್ರಹಿಸಿ ಸಂತ್ರಸ್ಥರಿಗೆ ಸಹಾಯಹಸ್ತ ಚಾಚುವುದು ಕೋಟಿ ಅವರ ಪತ್ರಿಕಾ ಸಮೂಹದ ಅವಿಭಾಜ್ಯ ಅಂಗವಾಗಿದೆ. ಕಾಗರ್ಿಲ್ ಯುದ್ಧ, ಗುಜರಾತ್ ಭೂಕಂಪ, ಕನರ್ಾಟಕದ ನೆರೆ ಸಂತ್ರಸ್ಥರಿಗೆ ನಿಧಿ ಸಂಗ್ರಹಿಸಿ ಸಹಾಯ ಹಸ್ತ ಚಾಚಿದ ಹೃದಯ ವೈಶಾಲ್ಯ ಅವರದು. ಸುನಾಮಿ ಸಂದರ್ಭದಲ್ಲಿ ಸಂತ್ರಸ್ಥರಾದವರಿಗೆ ಕಡಲೂರು ಬಳಿ ಮೈಸೂರು ಕಾಲೋನಿ ನಿಮರ್ಿಸುವ ಮೈಸೂರಿಗರ ಪ್ರಯತ್ನದಲ್ಲಿ ಪಾಲ್ಗೊಂಡಿದ್ದರು.
ತಮ್ಮ ಪತ್ರಿಕೆಯ ಆದಾಯದ ಬಹುಪಾಲನ್ನು ಸಮಾಜಸೇವೆಗೆ ವಿನಿಯೋಗಿಸುತ್ತಿರುವ ಹಿರಿಮೆ ರಾಜಶೇಖರ ಕೋಟಿಯವರದ್ದಾಗಿದೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ 21 ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿಮರ್ಿಸಿದ್ದಾರೆ.
ಹಲವಾರು ಸಕರ್ಾರಿ ಶಾಲೆಗಳಿಗೆ ಪೀಠೋಪಕರಣ ಒದಗಿಸಿದ್ದಾರೆ. ಕನ್ನಡ ಮಾಧ್ಯಮ ವಿದ್ಯಾಥರ್ಿಗಳಿಗೆ ಪ್ರಶಸ್ತಿಗಳನ್ನು ಪ್ರಾಯೋಜಿಸಿದ್ದಾರೆ. ಮೈಸೂರಿನ ಎಂ.ಜಿ.ರಸ್ತೆಯ ತರಕಾರಿ ಬೆಳೆಯುವ ಸಣ್ಣ ರೈತರು ಹಾಗೂ ಮಾರಾಟಗಾರರಿಗಾಗಿ ನೀರಿನ ಸೌಲಭ್ಯ ಒದಗಿಸಿರುವುದು ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿ. ಕ್ರೀಡಾ ಚಟುವಟಿಕೆಗಳಿಗೂ ವಿಶೇಷ ಪ್ರಾಶಸ್ತ್ಯ ನೀಡಿ ಪ್ರತಿ ವರ್ಷವೂ ರಾಜ್ಯಮಟ್ಟದ ಕಿರಿಯರ ಟೆನ್ನಿಸ್ ಪಂದ್ಯಾವಳಿ, ಗಾಲ್ಫ್ ಪಂದ್ಯಾವಳಿಯನ್ನು ಪ್ರಾಯೋಜಿಸುತ್ತಾ ಬಂದಿರುವುದಲ್ಲದೆ, ಕಳೆದ 13 ವರ್ಷಗಳಿಂದ ಮೈಸೂರು ವಿವಿಯ ಕ್ರೀಡಾ ವಿಭಾಗದವರ ಜೊತೆಗೂಡಿ ಹಾಕಿ ಲೋಕದ ದಂತಕಥೆ ಧ್ಯಾನ್ಚಂದ್ ಅವರ ನೆನಪಿನಲ್ಲಿ ಆಂದೋಲನ ಕಪ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದವರು. ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಪಂದ್ಯದ ಪ್ರಾಯೋಜಕರಲ್ಲಿ ಕೋಟಿ ಅವರು ಒಬ್ಬರಾಗಿದ್ದರು.ಕನರ್ಾಟಕ ಮಾಧ್ಯಮ ಅಕಾಡೆಮಿಗೆ ನಾಲ್ಕು ಬಾರಿ ಸದಸ್ಯರಾಗಿ ಪತ್ರಕರ್ತರ ಮಾನ್ಯತಾ ಸಮಿತಿಯಲ್ಲಿ ಎರಡು ಅವಧಿಗೆ ಸದಸ್ಯರಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು.
ಪತ್ರಿಕೋದ್ಯಮದಲ್ಲಿ ಸುದೀರ್ಘ ಕಾಲ ಸಲ್ಲಿಸಿದ ಸೇವೆಗೆ ರಾಜಶೇಖರ ಕೋಟಿ ಅವರಿಗೆ ಕನರ್ಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ರೋಟರಿ ಸುಪ್ರೀಂ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಜನಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಟಿ.ಎಸ್.ಆರ್ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಅಭ್ಯುದಯ ಪತ್ರಿಕೋದ್ಯಮ ಪೊ?ರೀತ್ಸಾಹಕ (ಮೆಂಟರ್) ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿರುವವರು. ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿಯಲ್ಲಿ ಪತ್ರಿಕಾ ಶಾಖಾ ಕಚೇರಿಗಳನ್ನು ಹೊಂದಿ ನೂರಕ್ಕೂ ಹೆಚ್ಚು ಸಿಬ್ಬಂದಿಗೆ ನೇರವಾಗಿ ಉದ್ಯೋಗ ಒದಗಿಸಿದ್ದಾರೆ. ಜಪಾನ್, ಸಿಂಗಪೂರ್, ಹಾಂಕಾಂಗ್, ಥೈಲ್ಯಾಂಡ್, ಮಲೇಷಿಯಾ, ನೇಪಾಳ, ದುಬೈ, ಅಬುದಾಬಿ ಹಾಗೂ ಶ್ರೀಲಂಕಾ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪತ್ರಿಕೆಗಳ ಕಾರ್ಯವಿಧಾನ ಸ್ವತಃ ವೀಕ್ಷಿಸಿ ಆ ಅನುಭವಗಳನ್ನು ಇಲ್ಲಿ ಧಾರೆಯೆರೆದಿದ್ದರು. ಇಷ್ಟೆಲ್ಲ ಸಾಧನೆ ಮಾಡಿದ ರಾಜಶೇಖರ ಕೋಟಿ ಅವರು ಇಂದು ಅಪಾರ ಶಿಷ್ಯ ಕೋಟಿಯನ್ನು ಪತ್ರಕರ್ತರ ಬಳಗ, ಕುಟುಂಬವರ್ಗದವರನ್ನು ಅಗಲಿದ್ದಾರೆ.


