HEALTH TIPS

ಯಾವುದೇ ಶೀರ್ಷಿಕೆಯಿಲ್ಲ

|| ಷಷ್ಠಿ : ಸುಬ್ರಾಯ ದೇವೆರೆ ಸುಗಿಪು || (ಬರೆಹ : ಕೆ . ಎಲ್ .ಕುಂಡಂತಾಯ ) ಕರಾವಳಿಯ ಅಲೌಕಿಕ ಅನುಸಂಧಾನವೇ ನಾಗ - ಸುಬ್ರಹ್ಮಣ್ಯಅಭೇದ ಕಲ್ಪನೆ . ಮೂಲದ ನಾಗ ಶ್ರದ್ಧೆಯು ಕರೆನಾಡಿಗೆ ಹರಿದುಬಂದ ವೈದಿಕದ ಸುಬ್ರಹ್ಮಣ್ಯ ಚಿಂತನೆಯೊಂದಿಗೆ ಸಂಲಗ್ನಗೊಂಡ ವಿಧಾನ ಶಿಷ್ಟ - ಜಾನಪದ ಸಂಸ್ಕೃತಿಗಳ ಸುಗಮಸಮಾಗಮಕ್ಕೆ ಪ್ರತ್ಯಕ್ಷ ಸಾಕ್ಷಿ . " ಸುಬ್ರಾಯ ದೇವೆರ್ ಅಜಿಪಕಾರ ಗದ್ದಿಗೆಡ್ , ಮೂಜಿಕಾರ ಮುಂಡು ಮುಕ್ಕಾಳಿಗೆಡ್ ,ಮೊರಂಪಾಯಿ ಮಲ್ಲಿಗೆಡ್ ಕೇದಾಯಿ ಸಂಪಿಗೆಡ್ , ಸರ್ಪಲಿಂಗೊಡು , ಮೈರ ಬಾಣೊಡು , ಒಡ್ಡುಪಾಡಿ ಒಲೆಗ ಆವೊಂದೆರ್ " ಬಲೀಂದ್ರ ಸಂಧಿಯಲ್ಲಿ ಬಲೀಂದ್ರನನ್ನು ವಂಚಿಸಲು ಹೊರಟ ಬ್ರಹ್ಮಚಾರಿ ಮಾಣಿಗಳು ಸುಬ್ರಹ್ಮಣ್ಯ ದೇವರನ್ನು ಹೀಗೆಂದು ಸ್ತುತಿಸುತ್ತಾರೆ . ಪಾಡ್ದನ ಕವಿಗಳು ಕಟ್ಟಿದ ಈ ಸಂಧಿಯು ಜನಪದರು ಸುಬ್ರಹ್ಮಣ್ಯ ದೇವರನ್ನು ಸ್ವೀಕರಿಸಿದ ಕ್ರಮ ಎಷ್ಟು ಸುಲಲಿವಾಗಿದೆ . ಇದನ್ನೆ ಸುಗಮ ಸಮಾಗಮವೆನ್ನುವುದು . ಸಮಾನ ಅನುಗ್ರಹ ವಿಶೇಷಗಳಿಂದ ,ಸಹಜವಾಗಿ ನಾಗ - ಸುಬ್ರಹ್ಮಣ್ಯ ಸಮೀಕರಣ ನಡೆದಿದೆ ಎನ್ನಲು ಪುರಾವೆಗಳಿವೆ . ಏನಿದ್ದರೂ ಸುಬ್ರಹ್ಮಣ್ಯ ನಮ್ಮ ಬಾಯಿಯಲ್ಲಿ "ಸುಬ್ಬರಾಯನಾದ , ಸುಬ್ರಾಯನೆಂದು ಪ್ರಸಿದ್ಧ ನಾದ . 1886ರಲ್ಲಿ ಬಾಸೆಲ್ ಮಿಶನ್ ಪ್ರಕಟಿಸಿದ ರೆವರೆಂಡ್ ಮ್ಯಾನರ್ ಸಂಪಾದಿಸಿದ ಪ್ರಾಚೀನ ಪಾಡ್ದನಗಳಲ್ಲಿ ಸುಬ್ರಹ್ಮಣ್ಯ ದೇವರ ಉಲ್ಲೇಖ ಅಲ್ಲಲ್ಲಿ ಇದೆ .ವಿಶೇಷವಾಗಿ " ಕುಕ್ಕೆ ಸುಬ್ರಾಯದೇವೆರ್ " ಎಂಬ ನುಡಿಗಳಿವೆ .ಪಂಜುಲರ್ಿ ದೈವದ ಪಾಡ್ದನದಲ್ಲಿ " ಸುಬ್ರಾಯ ದೇವೆರೆ ಗಟ್ಟ ಜಪ್ಪೊಡು , ಆರ್ ಬಡುವೆರ್ ಅರೆ ಗಂಡ ಗಣೊಕುಳು ಬುಡಾಯೋ " ಎಂಬ ಸಂಧಿಯಲ್ಲಿ ಪಶ್ಚಿಮ ಫಟ್ಟ ಮತ್ತು ಕೆಳಗಿನ ವ್ಯಾಪ್ತಿ ಸುಬ್ರಾಯ ದೇವರಿಗೆ ಸಂದದ್ದು ಮತ್ತು ಅವರಿಗೆ ಪ್ರಬಲ ಶಕ್ತಿಗಳ ಪರಿವಾರ (ಗಂಡ ಗಣೊಕುಲು)ವಿತ್ತು .ಸುಬ್ರಹ್ಮಣ್ಯ ದೇವರ ಆರಾಧನೆ ತುಳು ಸೀಮೆಯಲ್ಲಿ ಪ್ರಾಚೀನ ಹಾಗೂ ಎಷ್ಟು ಗಾಢವಾಗಿತ್ತೆಂಬುದನ್ನು ದೃಢೀಕರಿಸುತ್ತದೆ . ಧರ್ಮರಸು ಸಂಧಿಯಲ್ಲಿ ಮತ್ತು 'ಅತ್ತಾವರ ದೈಯ್ಯೊಂಗಳು ' ಪಾಡ್ದನಗಳಲ್ಲಿ ಸುಬ್ರಾಯ ದೇವೆರ್ ಬರುತ್ತಾರೆ .ಉಡುಪಿ ಜಿಲ್ಲೆಯ ಉತ್ತರ ಭಾಗದಲ್ಲಿ ವ್ಯಾಪಕವಾಗಿರುವ ಪಾಣರಾಟದ ಸ್ವಾಮಿಯ ಹೊಗಳಿಕೆಯಲ್ಲಿ " ಮುದ್ದುಸ್ವಾಮಿ" ಸಂಭೋಧನೆಯು ಸುಬ್ರಹ್ಮಣ್ಯ ದೇವರ ಸ್ವರೂಪದ ನಾಗನನ್ನೆ ಸೂಚಿಸುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ .ನಾಗಮಂಡಲ ,ಬ್ರಹ್ಮಮಂಡಲ,ಡಕ್ಕೆಬಲಿಯ ಹಾಡುಗಳಲ್ಲಿ (ನಾಂದಿ ಹಾಡು) 'ವಾಸುಕಿ ಸುಬ್ರಹ್ಮಣ್ಯ ತೆರಳಿ ಬಾ' ಎಂಬ ಆಹ್ವಾನವಿದೆ . ಇಲ್ಲೂ ನಾಗ - ಸುಬ್ರಮಣ್ಯ ಸಂಕಲನದ ಸ್ಪಷ್ಟ ನಿದರ್ೇಶವಿದೆ . ಯಕ್ಷಗಾನ ಸಭಾಲಕ್ಷಣ ಗ್ರಂಥವು ಪೂರ್ವರಂಗ ವಿಭಾಗದಲ್ಲಿ " ಚಿನ್ಮಯ ಕಾಯ . ಭಕ್ತ ಸಹಾಯ .ಶಕ್ತಿಸಖಾಯ ಶ್ರೀ ಸುಬ್ಬರಾಯ" ." ಕುಂಡಲಮಣಿ ಭೂಷಣ ಹೇ ಸುಬ್ಬರಾಯ " ಮುಂತಾದ ಹಾಡುಗಳನ್ನು ಹೇಳಿ ಪೂರ್ವರಂಗದಲ್ಲಿ ಸುಬ್ರಹ್ಮಣ್ಯ ವೇಷವನ್ನು ರಂಗದಲ್ಲಿ ಕುಣಿಸುವ ಸಂಪ್ರದಾಯವಿದೆ .ಇದು ಸುಬ್ರಹ್ಮಣ್ಯ ಆರಾಧನೆಯ ಪ್ರಭಾವವನ್ನು ನೆನಪಿಸುತ್ತದೆ . ನಾಗ ಈ ಮಣ್ಣಿನಲ್ಲಿ ಮೊತ್ತಮೊದಲು ದೈವೀಕರಿಸಲ್ಪಟ್ಟ ಆದಿಮ ದೇವರು . ಮಣ್ಣಿನ ಮಗನಾಗಿ , ಮಾನವ ಬದುಕಿನೊಂದಿಗೆ ನೇರ ಸಂಬಂಧವನ್ನು ಹೊಂದಿರುವ ದೈವತ . ಮುಂದೆ ಬೆಮರ್ೆರ್ ಬೂತಗಳ ಸ್ವೀಕಾರ , ನಂಬಿಕೆ ಆರಂಭಗೊಂಡು ನಾಗ ಬ್ರಹ್ಮ ಚಿಂತನೆ ರೂಢಿಗೆ ಬಂತು . ದೈವ ಪಾಡ್ದನಗಳಲ್ಲಿ ಪ್ರಾರಂಭದಲ್ಲೇ ನಾಗ - ಸುಬ್ರಹ್ಮಣ್ಯ ಸಮೀಕರಣ ನಿಚ್ಚಳವಾಗಿದೆ .ಬಳಿಕ ಬೇರೆ ಬೇರೆ ದೇವರುಗಳೊಂದಿಗೆ ನಾಗ ಸಮೀಕರಣ ಸಿದ್ಧವಾಗುತ್ತದೆ.. ಮಾರ್ಗಶಿರ ಶುದ್ಧ ಷಷ್ಢಿಯಂದು ಒದಗಿಬರುವ ಈ ಪ್ರರ್ವಕಾಲವು ಸುಬ್ರಮಣ್ಯ - ನಾಗ ಆರಾಧನೆಗೆ ಪ್ರಶಸ್ತಕಾಲ . ತಿಥಿಗಳಲ್ಲಿ ಪಂಚಮಿಯು " ಪೂರ್ಣ" ಎಂಬ ವಿಶೇಷವನ್ನು ಹೊಂದಿದೆ .ಆರನೇ ತಿಥಿ ಷಷ್ಠಿಯು "ನಂದಾ" ಎಂದು ಗುರುತಿಸಲ್ಪಡುತ್ತದೆ ( ನಂದ , ಭದ್ರಾ ,ಜಯಾ , ರಿಕ್ತಾ ,ಪೂರ್ಣ ಎಂಬ ತಿಥಿ ವಿಶೇಷಗಳು . ಈ ಐದು ತಿಥಿ ವಿಶೇಷಗಳು ಪುನರಾವರ್ತನೆಯಾಗುತ್ತಾ ಮೂರು ಬಾರಿ ಬಂದಾಗ ಹದಿನೈದು ದಿನಗಳ ಒಂದು ಪಕ್ಷವಾಗುತ್ತದೆ .) ನಂದಾ ಎಂಬುದು ಜ್ಞಾನ ವಾಚ್ಯಶಬ್ದ .ಸಂತೋಷದ ಸ್ವರೂಪ ,ಸಂತೋಷ ಕೊಡುವವನೆಂದೂ ,ಮಂಗಲಕರನೆಂಬುದೂ ವಿಶ್ಲೇಷಣೆಗೆ ದೊರೆಯುವ ಅರ್ಥ .ಇಂತಹ ಷಷ್ಠಿ ,ಸುಬ್ರಹ್ಮಣ್ಯ ಉಪಾಸನೆಗೆ ಪರ್ವಕಾಲ . ಪಂಚಮಿ ಅನಂತಸ್ವರೂಪದ್ದು , ಪೂರ್ಣ ಎಂದೇ ಅರ್ಥ . ಅನಂತ ರೂಪಿಯಾದ ನಾಗನು ಪಂಚಮಿಯಂದು ಪೂಜೆಗೊಳ್ಳವುದು ಸಹಜ .ಪಂಚಮಿಯ ಬಳಿಕ ಷಷ್ಠಿ ಈ ಎರಡೂ ದಿನಗಳ ಪಾವಿತ್ರ್ಯ ಅರಿತು ಆರಾಧಿಸಿದಾಗ "ಪೂಣರ್ಾನಂದ ಪ್ರಾಪ್ತಿ " ಸಂತಾನ , ಸಂಪತ್ತು ,ಕೃಷಿ ಸಮೃದ್ಧಿ ಯನ್ನು ಅನುಗ್ರಹಿಸುವ ದೇವರು ಮಹ ವ್ಯಾಧಿ - ಚರ್ಮವ್ಯಾಧಿಗಳನ್ನು ಪರಿಹರಿಸುವ ನಾಗ - ಸುಬ್ರಹ್ಮಣ್ಯ ದೇವರನ್ನು ಈ ಸಂದರ್ಭದಲ್ಲಿ ಸ್ಮರಿಸೋಣ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries