HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಜಪ-ತಪಗಳ ಅನುಷ್ಠಾನದಲ್ಲಿ ಆಸಕ್ತರಾಗಬೇಕು-ಕೈವಲ್ಯ ಶ್ರೀ ಪೆರ್ಲ: ಜೀವಸಂಕುಲಗಳ ಪೈಕಿ ಮನುಷ್ಯ ಜೀವನವು ಅತ್ಯಂತ ಶ್ರೇಷ್ಠವಾಗಿದ್ದು ಪುರುಷಾರ್ಥಗಳ ಪೂರೈಸುವ ಮೂಲಕ ಜೀವನವನ್ನು ಪಾವನಗೊಳಿಸುವ ಬಗ್ಗೆ ಚಿಂತಿಸುವ ಅಗತ್ಯವಿದೆ. ಜಗತ್ತಿಗೇ ಬೆಳಕು ನೀಡಿದ ಭಾರತ ಉಪನಿಷತ್ತು,ವೇದ ಪುರಾಣಗಳ ಮೂಲಕ ಬದುಕಿನ ನಿದರ್ೇಶನಗಳನ್ನು ನೀಡಿದ್ದು ಅವುಗಳ ಮಾದರಿಯಲ್ಲಿ ಬದುಕು ಸಾಗಿಸುವುದೇ ಮಾನವ ಜೀವನದ ಲಕ್ಷ್ಯವಾಗಿರಬೇಕು.ಇದು ನೆಮ್ಮದಿ ನೀಡುವುದು ಎಂದು ಶ್ರೀಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತೀ ಶ್ರೀಗಳು ಆಶೀವರ್ಾದ ಪೂರ್ವಕ ಹರಸಿದರು. ಅಡ್ಕಸ್ಥಳ ಸಮೀಪದ ಮೊಗೇರು ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದಲ್ಲಿ ನಡೆದ ಶತಚಂಡಿಕಾ ಯಾಗದ ಸಮಾರೋಪದ ಅಂಗವಾಗಿ ಗುರುವಾರ ಸಂಜೆ ನಡೆದ ಧಾಮರ್ಿಕ ಸಂಸತ್ತಿನಲ್ಲಿ ಅವರು ಆಶೀರ್ವಚನಗೈದು ಮಾತನಾಡಿದರು. ಮನಸ್ಸು, ಬುದ್ದಿಗಳ ಧನಾತ್ಮಕ ಉದ್ದೀಪನಕ್ಕೆ ಪಾರಂಪರಿಕ ಆಚರಣೆಗಳಾದ ಜಪ-ತಪಗಳ ಅನುಷ್ಠಾನದಲ್ಲಿ ಪ್ರತಿಯೊಬ್ಬರೂ ಆಸಕ್ತರಾಗಬೇಕು. ಸಾತ್ವಿಕ ಜೀವನ ಪದ್ದತಿ ಸಮಗ್ರ ಜೀವನದ ಉನ್ನತಿಗೆ ಕಾರಣವಾಗುವುದು ಎಂದು ಶ್ರೀಗಳು ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬರನ್ನು ಪ್ರೀತಿಸುವ, ಗೌರವಿಸುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಸಾರಸ್ವತ ಸಮಾಜ ಸಮಗ್ರ ಏಕತೆ ಮತ್ತು ಸಾಂಪ್ರದಾಯಿಕ ಜೀವನ ಕ್ರಮಗಳನ್ನು ಮುಂದುವರಿಸಿ ಇತರರಿಗೆ ಮಾದರಿಯಾಗಲಿ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮೋಂತಿಮಾರ್ ಶ್ರೀದುಗರ್ಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಕಾಸ್ ಪುತ್ತೂರು ಮಾತನಾಡಿ, ಜಗತ್ತಿಗೆ ಮಹತ್ತರ ಕೊಡುಗೆ ನೀಡಿದ ರಾಷ್ಟ್ರ ಭಾರತ. ಅದು ಧರ್ಮ-ಕರ್ಮಗಳ ಹಿನ್ನೆಲೆಯಲಲಿ ಬೆಳೆದುಬಂದ ಸಂಸೃತಿ. ಆದರೆ ಇಂದಿನ ಆಧುನಿಕ ಸಮಾಜ ಧರ್ಮಗಳಲ್ಲಿ ನಂಬಿಕೆ ಉಳಿಸಿಕೊಂಡಿಲ್ಲ. ಯಾಂತ್ರಿಕ ಜೀವನ, ಸಂಪತ್ತಿನ ಹಿಂದೋಡುವ ಸಮಾಜ ಇಂದಿರುವುದು ಆತಂಕಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶತಚಂಡಿಕಾ ಯಾಗ ಸಮಿತಿ ಉಪಾಧ್ಯಕ್ಷ ಬ್ರಹ್ಮರಗುಂಡ ದಿವಾಕರ ರಾವ್ ಅಧ್ಯಕ್ಷತೆ ವಹಿಸಿದ್ದರು. ಮೊಗೇರು ಶ್ರೀದುಗರ್ಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಶೇಣಿ ತೋಟದಮನೆ ಮುಕುಂದ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಣಿಪಾಲ ನರಸಿಂಗೆ ಶ್ರೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್ಕಾರ್, ಮೊಗೇರು ಶ್ರೀದುಗರ್ಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿವಾಕರ ರಾವ್ ಬ್ರಹ್ಮರಗುಂಡ, ಶತಚಂಡಿ ಯಾಗ ಸಮಿತಿ ಕಾಯರ್ಾಧ್ಯಕ್ಷ ಪುರುಷೋತ್ತಮ ಭಟ್ ದೇರ್ಕಜೆ, ಮಂಗಳೂರು ರಾಜಾಪುರ ಸಾರಸ್ವತ ಸಮಾಜದ ಅಧ್ಯಕ್ಷ ಆರ್ ಎಂ. ಪ್ರಭು, ರಾಜಾಪುರ ಸಾರಸ್ವತ ಸಮಾಜ ಸೇವಾ ಸಂಘ ವಿಟ್ಲದ ಅಧ್ಯಕ್ಷ ಸುನಿಲ್ ಬೋರ್ಕರ್, ಸುಳ್ಯದ ವೈದಿಕ ನಿತ್ಯಕರ್ಮ ಶಿಕ್ಷಣ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಭಟ್ ಮೊಗೇರು, ಕಾಸರಗೋಡು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಶ್ರೀಧರ ನಾಯಕ್ ಆಳಾರು, ಬಾಯಾರು ರಾಜಾಪುರ ಸಾರಸ್ವತ ಸೇವಾ ಸಂಘದ ಅಧ್ಯಕ್ಷ ಮನೋಹರ ನಾಯಕ್ ಕಂಪದಮೂಲೆ, ಆರ್.ಎಸ್.ಬಿ ಯೂತ್ ಮೊಗೇರು ಇದರ ಅಧ್ಯಕ್ಷ ಸತೀಶ್ ಬೋರ್ಕರ್ ಕುಡ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಶೇಣಿ ತೋಟದಮನೆ ರವೀಂದ್ರ ನಾಯಕ್ ಸ್ವಾಗತಿಸಿಅಲ್ಚಾರ್ ರಾಮಚಂದ್ರ ನಾಯಕ್ ವಂದಿಸಿದರು. ಕಮಲಾಕ್ಷ ನಾಯಕ್ ನಲ್ಕ ಕಾರ್ಯಕ್ರಮ ನಿರೂಪಿಸಿದರು. ಕೈವಲ್ಯ ಶ್ರೀಗಳು ಶುಕ್ರವಾರ ಅಪರಾಹ್ನ 3 ಗಂಟೆಯ ವರೆಗೆ ಮೊಗೇರು ಶ್ರೀಕ್ಷೇತ್ರದಲ್ಲಿ ಮೊಕ್ಕಾಂ ನಲ್ಲಿದ್ದು ಭಕ್ತರಿಗೆ ಭೇಟಿ-ಪಾದಪೂಜೆಗೆ ಅವಕಾಶವಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries