ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 24, 2017
ಸಹಸ್ರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ಸಮಾರೋಪಗೊಂಡ ಶತಚಂಡಿಕಾ ಯಾಗ
ಪೆರ್ಲ: ರಾಜಾಪುರ,ಬಾಲಾವಲೀಕಾರ್ ಸಾರಸ್ವತ ಬ್ರಾಹ್ಮಣರ ಶ್ರದ್ದಾ ಕೇಂದ್ರವಾದ ಅಡ್ಕಸ್ಥಳ ಸಮೀಪದ ಮೊಗೇರು ಶ್ರೀದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಮದ್ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನ ಹಾಗು ಉಪಸ್ಥಿತಿಯಲ್ಲಿ ನ. 19 ರಿಂದ ಆರಂಭಗೊಂಡಿರುವ ಶ್ರೀಶತಚಂಡಿಕಾ ಯಾಗದ ಪೂಣರ್ಾಹುತಿ ಗುರುವಾರ ಸಹಸ್ರಾರು ಭಗವದ್ಬಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಪಣರ್ಾಹುತಿ ನೆರವೇರಿತು.
ಗುರುವಾರ ಬೆಳಿಗ್ಗೆ 7ಕ್ಕೆ ಪ್ರಾಥಃಸ್ಮರಣೆ ಸಹಿತ ರ ಶುದ್ದಿ, ದೇವತಾ ಸ್ತಾಪನೆ, ಸಪ್ರಶತಿ ಪಾರಾಯಣ, ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ, ಶ್ರೀಶತಚಂಡಿಕಾ ಯಾಗ ಕುಮಾರಿಕಾ, ಸುಹಾಸಿನೀ ಪೂಜನ ಸಹಿತ ವೈಧಿಕ ವಿಧಿವಿಧಾನಗಳು, 10ಕ್ಕೆ ಡಾ.ಶಾಂತಾರಾಮ ಪ್ರಭು ನಿಟ್ಟೂರು ರವರಿಂದ ಸತ್ಸಂಗ, 10.30ಕ್ಕೆ ಭಿಕ್ಷಾ ಸಂಕಲ್ಪ, ಭಜನೆ, 11 ಗಂಟೆಗೆ ಶತಚಂಡಿಯಾಗದ ಮಹಾಪೂಣರ್ಾಹುತಿ ವೇದಘೋಷಗಳ ನಡುವೆ ನೆರವೇರಿತು. ಬಳಿಕ ಮಹಾಪೂಜೆ, ಮಂಗಳಾರತಿ, 1 ಗಂಟೆಗೆ ಭವಾನಿ ಶಂಕರ ದೇವರ ಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ 2 ಕ್ಕೆ ಪಾದಪೂಜೆ, ಮಂತ್ರಾಕ್ಷತೆಗಳು ನಡೆದವು. ಸಂಜೆ 6.30 ಕ್ಕೆ ಪೆರ್ಲದ ಸಂಕೀರ್ತನಾ ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ಪೂಜ್ಯ ಶ್ರೀಗಳು ಕಾಟುಕುಕ್ಕೆ ಶ್ರೀಕ್ಷೇತ್ರಕ್ಕೆ ಭೇಟಿ-
ಶ್ರೀಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತೀ ಶ್ರೀಗಳು ಬುಧವಾರ ಸಂಜೆ ಕಾಟುಕುಕ್ಕೆ ಗ್ರಾಮದ ಪ್ರಧಾನ ಕ್ಷೇತ್ರವಾದ ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನಕ್ಕೆ ಶ್ರೀಕ್ಷೇತ್ರದ ಆಡಳಿತ ಮಂಡಳಿಯ ಅಪೇಕ್ಷೆಯ ಮೇರೆಗೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದು ಭಕ್ತರಿಗೆ ಅನುಗ್ರಹಿಸಿದರು. ಶ್ರೀಗಳನ್ನು ಮೊದಲಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಪಿಲಿಂಗಲ್ಲು ವಿಷ್ಣು ಪ್ರಕಾಶ್ ಆಡಳಿತ ಮಂಡಳಿಯ ಪರವಾಗಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಶ್ರೀಗುರು ಮಠದ ಪರಂಪರೆಯ ಬಗ್ಗೆ ಕಜೆ ಚಂದ್ರಶೇಖರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ವಿವರಿಸಿದರು. ಶ್ರೀಗಳು ಆಶೀರ್ವಚನ ನೀಡಿ ಹರಸಿದರು.
ಕಾಟುಕುಕ್ಕೆ ಶ್ರೀ ಕ್ಷೇತ್ರ ಆಡಳಿತ ಮಂಡಳಿಯ ಮಿತ್ತೂರು ಪುರುಷೋತ್ತಮ ಭಟ್, ಸುಧಾಕರ ರೈ ಪಡ್ಡಂಬೈಲು, ದೀಪಕ್ ಭಂಡಾರದ ಮನೆ, ಸಂಜೀವ ರೈ ಕೆಂಗಣ್ಣಾಜೆ, ಮೊಗೇರು ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದ ಶತಚಂಡಿಕಾ ಯಾಗ ಸಮಿತಿ ಅಧ್ಯಕ್ಷ ಮುಕುಂದ ನಾಯಕ್ ಶೇಣಿ ತೋಟದಮನೆ, ರವೀಂದ್ರ ನಾಯಕ್ ಶೇಣಿ ತೋಟದಮನೆ, ಶ್ರೀಧರ ಮಾಸ್ತರ್, ಮೊಕ್ತೇಸರ ಕುಂಡೇರಿ ಜಯಂತ ನಾಯಕ್, ಸತೀಶ್ ಭಟ್ ಮೊಗೇರು, ಸೋಮಶೇಖರ ಜೆ.ಎಸ್, ಸದಾಶಿವ ಮಾಸ್ತರ್ ನೇರೋಳು ಮೊದಲಾದವರು ಉಪಸ್ಥಿತರಿದ್ದರು.
ಶತಚಂಡಿಕಾ ಯಾಗದ ಯಶಸ್ವಿಗೆ ಕಾರಣರಾದ ಯುವ ಸಮೂಹ:
ಮೊಗೇರು ಶ್ರೀಕ್ಷೇತ್ರದಲ್ಲಿ ನ.19 ರಿಂದ 23ರ ತನಕ ನಡೆದ ಶ್ರೀಶತಚಂಡಿಕಾ ಯಾಗ ಮತ್ತು ಶ್ರೀಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತೀ ಶ್ರೀಗಳ ಯಶಸ್ವೀ ಮೊಕ್ಕಾಂ ಸಮಾರಂಭದಲ್ಲಿ ದಿನನಿತ್ಯ ಮೂರು ಸಾವಿರಕ್ಕಿಂತಲೂ ಮಿಕ್ಕಿದ ಭಕ್ತರು ಪಾಲ್ಗೊಂಡಿದ್ದು, ವಿವಿಧ ಯುವ ತಂಡಗಳು ಜವಾಬ್ದಾರುಯುತರಾಗಿ ಕಾರ್ಯನಿರ್ವಹಿಸಿ ಯಶಸ್ವಿಗೆ ಕಾರಣರಾದರು.ರಾಜಾಪುರ ಸಾರಸ್ವತ ಸಮಾಜ ಸಂಘ ಸುಳ್ಯ, ಮಂಗಳೂರು, ಪುತ್ತೂರು, ವಿಟ್ಲ, ಮೋಂತಿಮಾರ್, ಬೆಳ್ತಂಗಡಿ, ಕಾಸರಗೋಡು, ಬಾಯಾರು, ಆರ್.ಎಸ್.ಬಿ.ಯೂತ್ ಮೊಗೇರು ತಂಡಗಳು ಅಹನರ್ಿಶಿ ಕಾರ್ಯನಿರ್ವಹಿಸಿ ಯಶಸ್ವಿಗೆ ಕಾರಣರಾದರು.


