ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 24, 2017
ಕುಂಜತ್ತೂರು ಶಾಲೆಯಲ್ಲಿ ವಿದ್ಯಾಥರ್ಿನಿಯರಿಗಾಗಿ ಕರಾಟೆ ತರಬೇತಿ
ಮಂಜೇಶ್ವರ: ಕುಂಜತ್ತೂರು ಜಿ.ವಿ.ಎಚ್.ಎಸ್.ಎಸ್ ಶಾಲೆಯಲ್ಲಿ ವಿದ್ಯಾಥರ್ಿನಿಯರಿಗಾಗಿ ಕರಾಟೆ ತರಬೇತಿ ತರಗತಿಗೆ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯ ಅಗಸ್ಟಿನ್ ಬನರ್ಾಡ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇವತ್ತಿನ ಸಂದರ್ಭಕ್ಕನುಸರಿಸಿ ವಿದ್ಯಾಥರ್ಿನಿಯರಿಗೆ ಪ್ರತ್ಯೇಕವಾಗಿಯೂ ಕರಾಟೆ ಅತೀ ಅಗತ್ಯವಾಗಿದ್ದು, ಎಲ್ಲಾ ವಿದ್ಯಾಥರ್ಿನಿಯರು ಕೂಡಾ ತರಬೇತಿಯ ಸದುಪಯೋಗವನ್ನು ಪಡಕೊಳ್ಳುವಂತೆ ವಿನಂತಿಸಿಕೊಂಡರು.
ಬಳಿಕ ವಿದ್ಯಾಥರ್ಿನಿಯರಿಗೆ ಕರಾಟೆ ತರಬೇತಿಯನ್ನು ನೀಡಲಾಯಿತು. ಸತತ ಎರಡು ತಿಂಗಳುಗಳ ಕಾಲ ಈ ತರಬೇತಿ ಶಾಲೆಯಲ್ಲಿ ನಡೆಯಲಿರುವುದಾಗಿ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಹಲವಾರು ವಿದ್ಯಾಥರ್ಿನಿಯರು ತರಬೇತಿಯ ಸದುಪಯೋಗ ಪಡೆಕೊಂಡರು.

