ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಭಾಗವತ ನಾರಾಯಣ ಮಾಟೆಯವರಿಗೆ ಸಮ್ಮಾನ
ಮುಳ್ಳೇರಿಯ: ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಆಕಾಶವಾಣಿ, ದೂರದರ್ಶನಗಳ ಯಕ್ಷಗಾನ ಭಾಗವತ ನಾರಾಯಣ ಮಾಟೆ ಅವರನ್ನು ಇತ್ತೀಚೆಗೆ ಮಂಗಳೂರು ಸಮೀಪದ ಇರಾ ಶ್ರೀ ಸೋಮನಾಥೇಶ್ವರ ದೇವಾಲಯದ ಶ್ರೀ ಸೋಮನಾಥೇಶ್ವರ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಸಮ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವ ಕಲಾವಿದರ ಸಂಘಟನೆಯಾದ ಶ್ರೀರಾಮ ಕಾರುಣ್ಯ ಕಲಾಸಂಘ ಕನ್ಯಾಡಿ ಧರ್ಮಸ್ಥಳ ಇದರ ನಾಲ್ಕನೇ ವಾಷರ್ಿಕೋತ್ಸವದ ಅಂಗವಾಗಿ ನಡೆದ ಯಕ್ಷ ಕಲೋತ್ಸವ-2017 ಕಾರ್ಯಕ್ರಮದ ಉದ್ಘಾಟನಾ ವೇದಿಕೆಯಲ್ಲಿ ಗಣ್ಯರು ಮಾಟೆ ಅವರನ್ನು ಗೌರವಿಸಿದರು. ಕಾರ್ಯಕ್ರಮವನ್ನು ನಿರೂಪಿಸಿ ಮಾತನಾಡಿದ ದೇವದಾಸ ಮಾಸ್ತರ್ ಅಕರ್ುಳ ಕೇರಳ ಜಾನಪದ ಅಕಾಡೆಮಿಯಿಂದ ಪುರಸ್ಕಾರಗೊಂಡಿರುವ ಮಾಟೆಯವರು ಯಕ್ಷಗಾನ ರಂಗದ ಪ್ರಸಿದ್ಧ ಹೆಸರು. ಯಕ್ಷಗಾನವನ್ನು ಮಲೆಯಾಳ ರಾಜ್ಯವಾದ ಕೇರಳದೆಲ್ಲೆಡೆ ಮಲೆಯಾಳ ಭಾಷೆಯಲ್ಲಿ ಪ್ರದಶರ್ಿಸಿ, ಸ್ವತ: ಮಲೆಯಾಳದ ಯಕ್ಷಗಾನದ ಹಾಡುಗಳನ್ನು, ಪ್ರಸಂಗಗಳನ್ನು ಸ್ವತ: ರಚಿಸಿ, ಹಾಡಿ ಕೇರಳದ ಜನತೆಯಲ್ಲಿ ಯಕ್ಷಗಾನದ ಕಂಪನ್ನು ಬೀರಿ ಹೆಸರು ಪಡೆದಿದ್ದಾರೆ. ಅಲ್ಲದೆ ದೂರದರ್ಶನ, ಆಕಾಶವಾಣಿ ಕೇಂದ್ರಗಳ ಮೂಲಕ ಯಕ್ಷಗಾನ ಪ್ರದಶರ್ಿಸಿ ವಿಜೃಂಭಿಸಿದ್ದಾರೆ. ಇಂತಹಾ ವ್ಯಕ್ತಿ ನಮ್ಮ ಸಮಾಜದಲ್ಲಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ನಂತರ ಬಿಲ್ಲವ ಕಲಾವಿದರಿಂದಲೇ ಭೀಷ್ಮ ವಿಜಯ ಎಂಬ ತಾಳ ಮದ್ದಳೆ ಮತ್ತು ಕಾರ್ತವೀಯರ್ಾಜರ್ುನ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.


