ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಚಿಲ್ಡ್ರನ್ಸ್ ಹೋಂ ಸ್ಥಳಾಂತರ ಆದೇಶ ಹಿಂತೆಗೆಯಲು ಮುಖ್ಯಮಂತ್ರಿಗೆ ಜಿ.ಪಂ. ಅಧ್ಯಕ್ಷರಿಂದ ಮನವಿ
ಕಾಸರಗೋಡು: ಜಿಲ್ಲೆಯಲ್ಲಿ ಕಾಯರ್ಾಚರಿಸುವ ಚಿಲ್ಡ್ರನ್ಸ್ ಹೋಂನ್ನು ಕಣ್ಣೂರಿಗೆ ಸ್ಥಳಾಂತರಿಸುವ ಬಗ್ಗೆ ಕೇರಳ ಸರಕಾರವು ಆದೇಶಿಸಿದ್ದು, ಈ ಆದೇಶವನ್ನು ಹಿಂತೆಗೆಯಬೇಕೆಂದು ಜಿಲ್ಲಾ ಪಂಚಾಯತು ಅಧ್ಯಕ್ಷ ಎ.ಜಿ.ಸಿ.ಬಶೀರ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಜಿಲ್ಲೆಯ ಪರವನಡ್ಕದಲ್ಲಿ ಕಾರ್ಯವೆಸಗುವ ಸರಕಾರಿ ಚಿಲ್ಡ್ರನ್ಸ್ ಹೋಂನ್ನು ಸೌಲಭ್ಯ ಕೊರತೆಯ ಹೆಸರಿನಲ್ಲಿ ಕಣ್ಣೂರಿಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ. ಜುವೆನೈಲ್ ಜಸ್ಟೀಸ್ ಆ್ಯಕ್ಟ್ನ ಆಧಾರದಲ್ಲಿ ಒಂದೇ ಕಟ್ಟಡದಲ್ಲಿ ಒಬ್ಸವರ್ೇಶನ್ ಹೋಂ ಮತ್ತು ಚಿಲ್ಡ್ರನ್ಸ್ ಹೋಂ ಎರಡೂ ಕಾಯರ್ಾಚರಿಸಬಾರದು. ಅದನ್ನೇ ನೆಪವಾಗಿಟ್ಟುಕೊಂಡು ಒಂದನ್ನು ಕಣ್ಣೂರಿಗೆ ಸ್ಥಳಾಂತರಿಸಲು ತೀಮರ್ಾನಿಸಲಾಗಿದೆ.
ಈ ಮಧ್ಯೆ ಕಾಸರಗೋಡು ಜಿಲ್ಲೆಯ ಚಿಲ್ಡ್ರನ್ಸ್ ಹೋಂ ನಲ್ಲಿ 20 ಮಂದಿ ಮಕ್ಕಳು ಮತ್ತು ಒಬ್ಸವರ್ೇಶನ್ ಹೋಂನಲ್ಲಿ 5 ಮಂದಿ ಮಕ್ಕಳನ್ನು ಸೇರಿಸಲು ಸೌಕರ್ಯವಿದೆ. ಅಲ್ಪಸಂಖ್ಯಾತ ಕನ್ನಡ ಭಾಷಿಗರ ಮಕ್ಕಳನ್ನು ಚಿಲ್ಡ್ರನ್ಸ್ ಹೋಂ ನಲ್ಲಿ ಸೇರಿಸಲಾಗುತ್ತಿದ್ದು, ಇವರಿಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ ಕಣ್ಣೂರಿಗೆ ಕೇಂದ್ರವನ್ನು ಬದಲಿಸಿದರೆ ಇವರ ಶಿಕ್ಷಣ ಮೊಟಕುಗೊಳ್ಳುವ ಸಾಧ್ಯತೆಯಿದೆ.
ಆ ಹಿನ್ನೆಲೆಯನ್ನು ಇದನ್ನು ಪರಿಗಣಿಸಿ ಚಿಲ್ಡ್ರನ್ಸ್ ಹೋಂನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಬೇಕೆಂದು ಮುಖ್ಯಮಂತ್ರಿಗೆ ನೀಡಿದ ಮನವಿಯಲ್ಲಿ ಜಿ.ಪಂ. ಅಧ್ಯಕ್ಷರು ಆಗ್ರಹಿಸಿದ್ದಾರೆ.

