ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಖಾಸಗಿ ಬಸ್ಗಳ ರಸ್ತೆ ತೆರಿಗೆ ಪಾವತಿ ವೇಳೆ ಅಕ್ಷಯ ಕೇಂದ್ರಗಳಿಂದ ಸೇವಾದರ ವಸೂಲಿ ಮಾಡಬಾರದು
ಕಾಸರಗೋಡು: ಖಾಸಗಿ ಬಸ್ಗಳ ರಸ್ತೆ ತೆರಿಗೆ, ಕ್ಷೇಮನಿಧಿ ಪಾಲನ್ನು ಆನ್ಲೈನ್ ಮೂಲಕ ಪಾವತಿಸುವುದಕ್ಕೆ ಅಕ್ಷಯ ಕೇಂದ್ರಗಳಲ್ಲಿ ಬೃಹತ್ ಮೊತ್ತವನ್ನು ಸೇವಾದರವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟಸರ್್ ಫೆಡರೇಶನ್ ಕಾಸರಗೋಡು ಇದರ ಸಭೆಯಲ್ಲಿ ಆರೋಪಿಸಲಾಗಿದೆ.
ಪ್ರಸ್ತುತ ಒಂದು ಬಸ್ನ ರಸ್ತೆ ತೆರಿಗೆ ಪಾವತಿಸಲು ಒಟ್ಟು ಮೊತ್ತದ ಒಂದು ಶೇಕಡಾ ಸೇವಾದರ (ಸಾಮಾನ್ಯ 300ರೂ.) ಅಕ್ಷಯ ಕೇಂದ್ರಗಳಲ್ಲಿ ವಸೂಲು ಮಾಡಲಾಗುತ್ತಿದೆ. ಆನ್ಲೈನ್ ಆಗಿ ಹಣ ಸ್ವೀಕರಿಸಲು ನೌಕರರ ಅಗತ್ಯವಿಲ್ಲದ ಕಾರಣ ಸರಕಾರದಿಂದ ನೌಕರರಿಗೆ ವೇತನ ನೀಡಲಾಗುತ್ತಿಲ್ಲ. ಅಕ್ಷಯ ಕೇಂದ್ರಗಳಲ್ಲಿ ಸವರ್ೀಸ್ ಚಾಜರ್್ ನೀಡಬೇಕಿದ್ದರೆ ಅದನ್ನು ಸರಕಾರವು ನೀಡಬೇಕಾಗಿದ್ದು, ಖಾಸಗಿ ಬಸ್ಗಳ ರಸ್ತೆ ತೆರಿಗೆ, ಕ್ಷೇಮನಿಧಿ ಪಾಲನ್ನು ಪಾವತಿಸುವಾಗ ಸೇವಾದರ ವಸೂಲು ಮಾಡಬಾರದೆಂದು ಸರಕಾರವು ಆದೇಶಿಸಬೇಕೆಂದು ಸಮಿತಿಯು ಒತ್ತಾಯಿಸಿದೆ.
ನ.21ರಂದು ಬೆಳಿಗ್ಗೆ 10.30ಕ್ಕೆ ಕಾಞಂಗಾಡು ಪುರಭವನದಲ್ಲಿ ನಡೆಯಲಿರುವ ಕೇರಳ ಮೋಟಸರ್್ ವ್ಯವಸಾಯಿ ಸಂರಕ್ಷಣಾ ಸಮಿತಿಯ ಸಮಾವೇಶವನ್ನು ಯಶಸ್ವಿಗೊಳಿಸಲು ನಿರ್ಧರಿಸಲಾಯಿತು.
ಈ ಕುರಿತು ಕಾಸರಗೋಡಿನಲ್ಲಿ ಜರಗಿದ ಸಭೆಯಲ್ಲಿ ಅಧ್ಯಕ್ಷ ಕೆ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದಶರ್ಿ ಸತ್ಯನ್ ಪೂಚಕ್ಕಾಡ್ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷ ಎಂ.ಹಸೈನಾರ್, ತಿಮ್ಮಪ್ಪ ಭಟ್, ಜೊತೆ ಕಾರ್ಯದಶರ್ಿಗಳಾದ ಶಂಕರ ನಾಕ್, ಲಕ್ಷ್ಮಣನ್, ಕೋಶಾಧಿಕಾರಿ ಪಿ.ಎ.ಮುಹಮ್ಮದ್ ಕುಂಞಿ, ಕಾಸರಗೋಡು ತಾಲೂಕು ಕಾರ್ಯದಶರ್ಿ ಸಿ.ಎ.ಮುಹಮ್ಮದ್ ಕುಂಞಿ, ಹೊಸದುರ್ಗ ತಾಲೂಕು ಕಾರ್ಯದಶರ್ಿ ಸಿ.ಎ.ಶ್ರೀಪತಿ, ರಾಧಾಕೃಷ್ಣನ್ ಮಾತನಾಡಿದರು.


