ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಉಚಿತ ನೇತ್ರ ಶಿಬಿರ
ಕುಂಬಳೆ: ಶೇಡಿಕಾವು ಶಂಕರಪುರಂ ಶ್ರೀಕೃಷ್ಣ ವಿದ್ಯಾಲಯದಲ್ಲಿ ನ.19ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ.
ಶ್ರೀ ಧರ್ಮಚಕ್ರ ಟ್ರಸ್ಟ್, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಅಕ್ಷಯ ಡಿಸ್ಟ್ರಿಬ್ಯೂಟಸರ್್ ಪುತ್ತೂರು, ಶೇಡಿಕಾವು ಶಂಕರಪುರಂ ಶ್ರೀಕೃಷ್ಣ ವಿದ್ಯಾಲಯ ಇವುಗಳ ಆಶ್ರಯದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಆಡಳಿತಾಧಿಕಾರಿ ಡಾ.ಎಂ.ಶ್ರೀಧರ ಭಟ್ ಉಪ್ಪಳ ಪ್ರಾಸ್ತಾವಿಕವಾಗಿ ಮಾತನಾಡುವರು. ನೇತ್ರ ತಜ್ಞರಾದ ಡಾ.ಪ್ರಶಾಂತ್ಕುಮಾರ್ ಆಚಾರ್, ಡಾ.ಆನಂದ ತಪಾಸಣೆ ನಡೆಸುವರು.


