ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಇಂಟರ್ ಕಾಲೇಜಿಯೆಟ್ ಗೇಮ್ಸ್ ಫೆಸ್ಟ್ ಕುಂಬಳೆಯಲ್ಲಿ
ಕುಂಬಳೆ: ಕುಂಬಳೆಯ ಪ್ರತಿಷ್ಠಿತ ಮಹಾತ್ಮಾ ಕಾಲೇಜಿನ ಆಶ್ರಯದಲ್ಲಿ ಜಿಲ್ಲೆಯ ಆಯ್ದ ವಿವಿಧ ಕಾಲೇಜುಗಳನ್ನು ಪಾಲ್ಗೊಳ್ಳಿಸಿ ಕುಂಬಳೆಯಲ್ಲಿ ಇಂಟರ್ ಕಾಲೇಜಿಯೆಟ್ ಗೇಮ್ಸ್ ಫೆಸ್ಟ್ ನ.25 ರಿಂದ ಆರಂಭಗೊಳ್ಳಲಿದೆ ಎಮದು ಸಂಘಟಕರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುಟ್ಬಾಲ್, ವಾಲಿಬಾಲ್, ಕಬ್ಬಡಿ, ಕ್ರಿಕೆಟ್, ಶಟಲ್ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗುವುದು. ವಿಜೇತರಿಗೆ ಹಾಗೂ ಹೆಚ್ಚು ಅಂಕ ದಾಖಲಿಸುವ ಕಾಲೇಜಿಗೆ ಚಾಂಪ್ಯನ್ ಟ್ರೋಫಿ ನೀಡಲಾಗುವುದು. ನ.25 ರಿಂದ ಡಿ. 23ರ ವರೆಗೆ ಸ್ಪಧರ್ೆಗಳು ನಡೆಯಲಿದ್ದು, ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಸ್ಪಧರ್ೆಗಳನ್ನೂ ನಡೆಸಲು ಉದ್ದೇಶಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಯಶಸ್ವಿಗಾಗಿ ಪ್ರಾಂಶುಪಾಲ ಕೆ.ಎಂ.ಸತ್ತಾರ್, ಮುಖ್ಯ ರಕ್ಷಾಧಿಕಾರಿಯಾಗಿ ಸಹಾಯಕ ಪ್ರಾಂಶುಪಾಲ ಅಬ್ದುಲ್ ಲತೀಫ್ ಉಳುವಾರ್, ಅಧ್ಯಕ್ಷರಾಗಿ ಇಸ್ಮಾಯಿಲ್ ಮಾಸ್ತರ್, ಕಾರ್ಯದಶರ್ಿ ಸಹಿತ ಐವರು ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಇಸ್ಮಾಯಿಲ್ ಮಾಸ್ತರ್, ಕೌಸರ್ ಮಾಸ್ತರ್, ಅಬ್ದುಲ್ ನಾಸಿರ್, ಅಬ್ದುಲ್ ಹಮೀದ್, ಮುಹಮ್ಮದ್ ಹಾಶಿಂ ಭಾಗವಹಿಸಿದ್ದರು. ಈ ಸಂದರ್ಭ ಗೇಮ್ಸ್ ಫೆಸ್ಟ್ ಲಾಂಛನವನ್ನು ಕುಂಬಳೆ ಪತ್ರಕರ್ತರ ಪೋರಂ ಅಧ್ಯಕ್ಷ ಸುರೇಂದ್ರನ್ ಮಾಸ್ತರ್ ಬಿಡುಗಡೆಗೊಳಿಸಿದರು.


